Asianet Suvarna News Asianet Suvarna News

News Hour: ಇಂಡಿ ಒಕ್ಕೂಟವನ್ನು ಹಿಂಡಿ ಹಿಪ್ಪೆ ಮಾಡ್ತಾರಾ ಅಖಿಲೇಶ್‌ ಯಾದವ್‌?

ಇಂಡಿ ಒಕ್ಕೂಟಕ್ಕೆ ಬಂಡಾಯದ ಬಿಸಿ ಎದುರಾಗಿದೆ. ಆಪ್‌ ಬಳಿಕ ಕಾಂಗ್ರೆಸ್‌ ನಾಯಕರಿಗೆ ಅಖಿಲೇಶ್‌ ಯಾದವ್‌ ಆಘಾತ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಕ್ಕಟ್ಟು ಎದುರಾಗಿರುವ ನಡುವೆ ಇಂಡಿ ಒಕ್ಕೂಟದಿಂದ ಸಮಾಜವಾದಿ ಪಕ್ಷ ಹೊರನಡೆಯಲಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. 

ಬೆಂಗಳೂರು (ಅ. 20):  2024ರ ಮಹಾಭಾರತಕ್ಕೆ ಪಂಚರಾಜ್ಯ ಚುನಾವಣೆಯೇ ಸೆಮಿಫೈನಲ್. ಎನ್ಡಿಎ V/S ಇಂಡಿ ಒಕ್ಕೂಟದ ಯುದ್ಧ ಈಗಲೇ ಶುರುವಾಗಿದೆ. ಆದರೆ, ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಟ್ಟಿ ಬಿಡುಗಡೆ ಬಳಿಕ ಇಂಡಿಯಾ ಮೈತ್ರಿಕೂಟದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

ಉತ್ತರ ಪ್ರದೇಶ ಬಿಟ್ಟರೆ ಮಧ್ಯಪ್ರದೇಶದಲ್ಲೇ ಸಮಾಜವಾದಿ ಪಕ್ಷ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ.. 2018ರ ಮಧ್ಯಪ್ರದೇಶದ 52 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಒಂದೇ ಸ್ಥಾನದಲ್ಲಿ ಗೆದ್ದಿತ್ತು. ಆದರೆ, ಈ ಬಾರಿ ಇಂಡಿಯಾ ಮೈತ್ರಿ ರಚನೆ ಬಳಿಕ ಕಾಂಗ್ರೆಸ್ ಜತೆಗೂಡಿ ಕನಿಷ್ಠ 12 ಸ್ಥಾನ ಬಿಟ್ಟು ಕೊಡಲು ಬೇಡಿಕೆ ಇಟ್ಟಿತ್ತು. ಆದರೆ ಒಂದೂ ಸ್ಥಾನ ಬಿಟ್ಟು ಕೊಡದೇ, ಇಂಡಿಯಾ ಮೈತ್ರಿ ಲೋಕಸಭೆಗೆ ಮಾತ್ರ ಎಂಬ ಮಧ್ಯ ಪ್ರದೇಶ ಮಾಜಿ ಸಿಎಂ ಕಮಲನಾಥ್ ಹೇಳಿಕೆ ಅಖಿಲೇಶ್ ಯಾದವ್ ಪಿತ್ತ ನೆತ್ತಿಗೇರಿಸಿದೆ.

'ದೇಶಭಕ್ತ ಎನಿಸಿಕೊಳ್ಳಲು ನೆರೆಯ ದೇಶವನ್ನು ವಿರೋಧಿಸಲೇಬೇಕು ಅಂತೇನಿಲ್ಲ..', ಬಾಂಬೆ ಹೈಕೋರ್ಟ್‌ ತೀರ್ಪು!

ಮಾಜಿ ಸಿಎಂ ಕಮಲನಾಥ್ ಈ ಹೇಳಿಕೆಯಿಂದ ಸಿಡಿದೆದ್ದ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕರು ಇಂಡಿಯಾ ಮೈತ್ರಿಕೂಟ ಲೋಕಸಭೆಗೆ ಮಾತ್ರನಾ? ವಿಧಾನಸಭೆಗೆ ಇಲ್ವಾ ಎಂಬುದನ್ನ ಸ್ಪಷ್ಟಪಡಿಸಲಿ.. ಮುಂದಿನ ಲೋಕಸಭೆ ಈಗ ಅವರ ವ್ಯವಹಾರ ಹೇಗಿದೆಯೋ ಅದೇ ರೀತಿ ನಮ್ಮ ವ್ಯವಹಾರ ಇರುತ್ತೆ ಅನ್ನುತ್ತಲೇ ಮೈತ್ರಿಯಿಂದ ಹೊರಬರುವ ಮುನ್ಸೂಚನೆ ನೀಡಿದ್ದಾರೆ. ಮಧ್ಯ ಪ್ರದೇಶದಲ್ಲಿ 31 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ್ದು, ಛತ್ತೀಸ್‌ಗಢ ರಾಜಸ್ಥಾನದಲ್ಲೂ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.