ಹೆಸರಿಗೆ ಮಾತ್ರ ಆಮ್‌ ಆದ್ಮಿ, ಮನೆ ಐಷಾರಾಮಿ; ವರದಿ ಬಿಚ್ಚಿಟ್ಟಿದೆ ಕೇಜ್ರಿವಾಲ್ ಅಸಲೀ ಕಹಾನಿ!

ಪಕ್ಷದ ಹೆಸರು ಆಮ್ ಆದ್ಮಿ ಪಾರ್ಟಿ. ಜನಸಾಮಾನ್ಯರ , ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪಾರ್ಟಿ ಎಂದು ಹೇಳಿ ಅಧಿಕಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್, ಅಸಲಿ ಕಹಾನಿ ಬೇರೆ ಇದೆ. ಒಂದು ವರದಿಯಿಂದ ದೆಹಲಿಯ ಜನಸಾಮಾನ್ಯರ ಪಾರ್ಟಿಯ ಅಸಲಿಯತ್ತು ಕಳಚಿ ಬಿದ್ದಿದೆ. 

Share this Video
  • FB
  • Linkdin
  • Whatsapp

ನವದೆಹಲಿ(ಏ.27): ಆಮ್ ಆದ್ಮಿ ಪಾರ್ಟಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಾವು ಮಾಡುವ ಭಾಷಣಕ್ಕೂ ನಡೆಗೂ ತಾಳೆ ಆಗಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ತಲೆಮೇಲೆ ಹೊಡದ ರೀತಿ ಮಾತುಗಳನ್ನಾಡುವ ಅರವಿಂದ್ ಕೇಜ್ರಿವಾಲ್‌ ಹಾಗೂ ಆಪ್ ಮುಖವಾಡವನ್ನು ವರದಿ ಬಿಚ್ಚಿಟ್ಟಿದೆ. ಸಿಎಂ ಆದ ಬಳಿಕವೂ ಸರಳತೆಯೇ ನನ್ನ ಮೂಲಮಂತ್ರ, ಐಷಾರಾಮಿತನ ಬೇಕಿಲ್ಲ ಎಂದಿದ್ದ ಅರವಿಂದ್ ಕೇಜ್ರಿವಾಲ್, ತಮ್ಮ ಮನೆಗೆ ನವೀಕರಣಕ್ಕೆ ಬರೋಬ್ಬರಿ 45 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ. ಮನೆಯಲ್ಲಿ ಬಳಸಿರುವ ಕಿಟಕಿಯ ಒಂದು ಕರ್ಟನ್ ಬೆಲೆ 5 ಲಕ್ಷ ರೂಪಾಯಿ. ಖಾಸಗಿ ಸುದ್ದಿ ವಾಹನಿ ಆಪರೇಶನ್ ಶೀಶ್ ಮಹಲ್ ಅನ್ನೋ ವರದಿ ಪ್ರಸಾರ ಮಾಡಿದ ಬಳಿಕ ಇದೀಗ ಆಮ್ ಆದ್ಮಿ ಪಾರ್ಟಿ ಐಷರಾಮಿ ಬದುಕು ಬಹಿರಂಗವಾಗಿದೆ.

Related Video