News Hour ಹುಬ್ಬಳ್ಳಿ ಗಲಭೆ ಹಿಂದೆ ಮುಸ್ಲಿಂ ಸಂಘಟನೆ ರಝಾ ಕೈವಾಡ ಕುರಿತು ತನಿಖೆ!
- ಹುಬ್ಬಳ್ಳಿ ಗಲಭೆ ತನಿಖೆ ಚುರುಕು, ಮುಸ್ಲಿಂ ಸಂಘಟನೆ ಕೈವಾಡ ಶಂಕೆ
- ಸೇಡು ತೀರಿಸಿಕೊಳ್ಳಲು ಹುಬ್ಬಳ್ಳಿ ಗಲಭೆ ಪ್ಲಾನ್
- ಭಯೋತ್ಪಾದಕರನ್ನು ಕರೆಸಿ ಬಿರಿಯಾನಿ ತಿನ್ನಿಸುವ ಕಾಲ ಇಲ್ಲ ಎಂದ ಸಿಟಿ ರವಿ
ಹುಬ್ಬಳ್ಳಿ ಗಲಭೆ ಹಿಂದೆ ಮುಸ್ಲಿಂ ಸಂಘಟನೆ ರಝಾ ಅಕಾಡೆಮಿ ಕೈವಾಡದ ಅನುಮಾನ ಬಲಗೊಳ್ಳುತ್ತಿದೆ. ಬಂಧಿತ ವಸೀಂ ಸೇರಿದಂತೆ ಮುಲ್ಲಾ, ಮಲಿಕ್ ಬೇಪಾರಿ ಕೂಡ ಇದೇ ಸಂಘಟನೆ ಸದಸ್ಯರಾಗಿದ್ದಾರೆ. ಸೇಡು ತೀರಿಸಿಕೊಳ್ಳಲು ಹುಬ್ಬಳ್ಳಿ ಗಲಭೆ ಸೃಷ್ಟಿಸಿರುವುದಾಗಿ ಪೊಲೀಸರಿಗೆ ಮಾಹಿತಿ ಕಲೆಹಾಕಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ. ಭಯೋತ್ಪಾದಕರನ್ನು ಕರೆಸಿ ಬಿರಿಯಾನಿ ತಿನ್ನಿಸುವ ಕಾಲ ಇಲ್ಲ. ಇದೀಗ ಬುಲ್ಡೋಜರ್ ತಂದು ನೆಲೆಸಮ ಮಾಡುವ ಕಾಲ ಇದು ಎಂದು ಸಿಟಿ ರವಿ ಹೇಳಿದ್ದಾರೆ. ಬುಲ್ಡೋಜರ್ ಕ್ರಮ ಕುರಿತು ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.