ರಾಮರಥ ಸಾರಥಿಗಳಿಗೆ ಬರಬೇಡಿ ಅಂದದ್ದೇಕೆ? ದೇವೇಗೌಡರಿಗೆ ದೊರೆತ ಆಹ್ವಾನ.. ಬಿಜೆಪಿ ದಿಗ್ಗಜರಿಗೆ ಏಕಿಲ್ಲ..?
ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ಹೋರಾಟ ನಡೆಸಿದ್ದ ಪ್ರಮುಖ ವ್ಯಕ್ತಿಗಳಾದ ಲಾಲ್ ಕೃಷ್ಣ ಆಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರಿಗೆ ಪ್ರಾಣ ಪ್ರತಿಷ್ಠಾಪನೆ ಆಹ್ವಾನ ನೀಡುತ್ತಲೇ, ಕಾರ್ಯಕ್ರಮಕ್ಕೆ ಬರಬೇಡಿ ಎನ್ನುವ ಮನವಿ ಮಾಡಲಾಗಿದೆ. ಅದರ ಹಿಂದಿನ ಉದ್ದೇಶವೇನು?
ಬೆಂಗಳೂರು (ಡಿ.20): ರಾಮರಥ ಸಾರಥಿಗಳ ಬಗ್ಗೆ ಹೇಳಿದ್ದೇನು ರಾಮ ಜನ್ಮ ಭೂಮಿ ಟ್ರಸ್ಟ್..? ಲಾಕ್ ಕೃಷ್ಣ ಅಡ್ವಾಣಿ.. ಮುರಳಿ ಮನೋಹರ ಜೋಷಿ.. ಈ ಇಬ್ಬರಿಗೂ ಬರಬೇಡಿ ಅಂತ ಹೇಳುತ್ತಲೇ ಆಹ್ವಾನ ಪತ್ರಿಕೆ ನೀಡಿದ್ದೇಕೆ.? ದೇವೇಗೌಡರಿಗೆ ದೊರೆತ ಆಹ್ವಾನ.. ಬಿಜೆಪಿ ದಿಗ್ಗಜರಿಗೆ ಏಕಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.
ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೆ ಬರಬೇಡಿ ಅಂತಾ ಹೇಳಿದ್ದಕ್ಕೆ ಅಸಮಾಧಾನ ಹೊರ ಹಾಕೋದ್ರಲ್ಲಿ ಅರ್ಥವಿದೆ.. ಆದರೆ, ದೇವೇಗೌಡರಿಗೆ ಆಹ್ವಾನ ಕೊಟ್ಟು, ಈ ಇಬ್ಬರನ್ನು ಆಮಂತ್ರಿಸದೇ ಉಳಿದಿದ್ದಕ್ಕೆ ಆಕ್ರೋಶವೇ ವ್ಯಕ್ತವಾಗುತ್ತಿದೆ. ಅದಕ್ಕೇನು ಕಾರಣ?
Ayodhya Ground Report: ಅಯೋಧ್ಯೆಯಲ್ಲಿರುವ ವ್ಯವಸ್ಥೆಗಳೇನು, ಚಂಪತ್ ರೈ ಹೇಳ್ತಾರೆ ಕೇಳಿ..
ಅಷ್ಟಕ್ಕೂ ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ನಿಜಕ್ಕೂ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಅವರನ್ನ ಟ್ರಸ್ಟ್ ಕಡೆಗಣಿಸೋಕೆ ಅವಕಾಶವಾದ್ರೂ ಇದ್ಯಾ.? ಆ ಸಾಧ್ಯತೆಯಂತೂ ಇಲ್ಲ. ಹಾಗಿದ್ದ ಮೇಲೆ ಅಸಮಾಧಾನಗೊಂಡವರಿಗೆ ಉತ್ತರ ಏನು ಅನ್ನೋ ಕುತೂಹಲ ಎಲ್ಲರಲ್ಲಿದೆ.