ಅಯೋಧ್ಯೆಯಲ್ಲಿ 'ನಮೋ' ದೀಪಾವಳಿ: ಲಕ್ಷಾಂತರ ಹಣತೆಗಳಿಂದ ಬೆಳಗಲಿದೆ ರಾಮಜನ್ಮಭೂಮಿ
ರಾಮ ಜನ್ಮಭೂಮಿ ಅಯೋಧ್ಯೆಯು ದೀಪೋತ್ಸವಕ್ಕೆ ಸಜ್ಜುಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಲಿದ್ದಾರೆ. ಹೀಗಾಗಿ ದೀಪಾವಳಿ ಹಬ್ಬಕ್ಕಾಗಿ ಅಯೋಧ್ಯೆ ಕಂಗೊಳಿಸುತ್ತಿದೆ.
ಈ ಬಾರಿ ಬೆಳಕಿನ ಹಬ್ಬ ದೀಪಾವಳಿಯನ್ನು ಪ್ರಧಾನಿ ನರೇಂದ್ರ ಮೋದಿ ವಿಶಿಷ್ಟವಾಗಿ ಆಚರಿಸುತ್ತಿದ್ದು, ಅದರಂತೆ ಇಂದು ರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಿ, ಬೆಳಕಿನ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಅಯೋಧ್ಯೆಯು ದೀಪಾವಳಿಗಾಗಿ ಕಂಗೊಳಿಸುತ್ತಿದ್ದು, ವಿದೇಶಿ ಕಲಾವಿದರ ಕಲಾ ಪ್ರದರ್ಶನಕ್ಕೆ ಉತ್ತರ ಪ್ರದೇಶ ಸರ್ಕಾರ ವೇದಿಕೆ ನೀಡಿದೆ. ಮೋದಿಯ ಎದುರು ರಷ್ಯಾ, ಮಲೇಷಿಯಾ ಹಾಗೂ ಲಂಕಾ ದೇಶಿಗರಿಂದ ರಾಮಲೀಲಾ ಉತ್ಸವ ನಡೆಯಲಿದೆ. ಹಾಗೂ ಸರಯೂ ತೀರದಲ್ಲಿ 17 ಲಕ್ಷ ದೀಪಗಳು ಬೆಳಗಲಿವೆ.
Diwali 2022 : ನಿಮ್ಮ ಮಾತಿಗೆ ಪತಿ ತಲೆ ಅಲ್ಲಾಡಿಸ್ಬೇಕಾ? ದೀಪಾವಳಿಯಂದು ಈ ಕೆಲಸ ಮಾಡಿ