
ರಾಜ್ಯಸಭೆಯಲ್ಲಿ ಧನ್ಕರ್ಗೆ ಅವಮಾನಿಸಿದ್ರಾ ನಡ್ಡಾ? ಉಪರಾಷ್ಟ್ರಪತಿ ಹೇಳುವ ಮಾತು ನಡ್ಡಾ ಹೇಳಿದ್ದೇಕೆ?
ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆ.ಪಿ. ನಡ್ಡಾ ನಡುವೆ ಮಾತಿನ ಚಕಮಕಿ ನಡೆದಿದೆ. ಉಗ್ರರ ದಾಳಿ ಮತ್ತು ಸರ್ಕಾರದ ಕ್ರಮಗಳ ಬಗ್ಗೆ ಖರ್ಗೆ ಟೀಕೆ ಮಾಡಿದ್ದಕ್ಕೆ ನಡ್ಡಾ ಪ್ರತಿಕ್ರಿಯಿಸಿದ್ದಾರೆ. ಈ ವಾಗ್ವಾದದಲ್ಲಿ ಉಪರಾಷ್ಟ್ರಪತಿಯವರನ್ನು ಅವಮಾನಿಸಿಲ್ಲ ಎಂದು ನಡ್ಡಾ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ಜು.23): ಸೋಮವಾರ ರಾಜ್ಯಸಭೆಯಲ್ಲಿ ಖರ್ಗೆ ವರ್ಸಸ್ ಜೆ.ಪಿ ನಡ್ಡಾ ಕಾದಾಟವಾಗಿದೆ. ‘ನೀವು ಮಾತನಾಡೋದು ರೆಕಾರ್ಡ್‌ಗೆ ಹೋಗಲ್ಲ. ನಾನು ಮಾತಾಡಿದ್ದು, ಮಾತ್ರ ರೆಕಾರ್ಡ್‌ಗೆ ಹೋಗುತ್ತೆ' ಎನ್ನುವ ಜೆ. ಪಿ ನಡ್ಡಾ ಮಾತಿಗೆ ವಿಪಕ್ಷ ನಾಯಕರು ಕೆರಳಿದ್ದಾರೆ. ಈ ವೇಳೆ ಉಪರಾಷ್ಟ್ರಪತಿಯನ್ನು ಅವಮಾನಿಸಿಲ್ಲ ಎಂದು ನಡ್ಡಾ ಸ್ಪಷ್ಟನೆ ನೀಡಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್ ಉಗ್ರರ ದಾಳಿ ನಡೆಯಿತು. ‘ಇವತ್ತಿನವರೆಗೂ ಭಯೋತ್ಪಾಕರನ್ನ ಹಿಡಿದಿಲ್ಲ ಅಥವಾ ಹೊಡೆದಿಲ್ಲ. ನಾವು ಅವರಿಗೆ ಪದೇ ಪದೇ ಹೇಳಿದೆವು. ಅವರು ಮೇಲಿಂದ ಹೊಡೆದ್ರು, ಅವರು ಸಾವನ್ನಪ್ಪಿದ್ರು ಈ ರೀತಿ ಸುದ್ದಿ ಕವರ್ ಆದ ಬಗ್ಗೆ ನಮಗೆ ತಿಳಿದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ವೇಳೆ ಜೆಪಿ ನಡ್ಡಾ ‘ನೀವು ಖರ್ಗೆ ಅವರಿಗೆ ನಿಯಮ 267 ರಲ್ಲಿ ಮಾತಾಡಲು ಅವಕಾಶ ನೀಡಿದ್ದೀರಿ. ಸಂವಿಧಾನಿಕ ವಿಚಾರದ ಚರ್ಚೆ ಮಾಡಿ ಎಂದುನೀವು ಅವಕಾಶ ನೀಡಿದ್ದೀರಿ. ಈ ಸದನದಿಂದ ದೇಶಕ್ಕೆ ಬೇರೆ ರೀತಿ ಸಂದೇಶ ಹೋಗೋದು ಬೇಡ. ಪಹಲ್ಗಾಮ್ ಮತ್ತು ಆಪರೇಷನ್ ಸಿಂಧೂರ್ ಚರ್ಚೆ ಮಾಡಲ್ಲ ಅನ್ನೋದು ಬೇಡ ಎಂದು ಅವರು ಹೇಳಿದ್ದರು.