Asianet Suvarna News Asianet Suvarna News

Rajeev Chandrasekhar: ನಿವೃತ್ತಿಯ ಉದ್ದೇಶವಿಲ್ಲ, ರಾಜಕೀಯ ನನಗೆ ಸಾರ್ವಜನಿಕರಿಗೆ ಸೇವೆ ಮಾಡುವ ಅವಕಾಶ

ಏಷ್ಯಾನೆಟ್ ನ್ಯೂಸ್‌ನ "ಅರೌಂಡ್ ಅಂಡ್ ಅಸೈಡ್" ನಲ್ಲಿ ವಿಶೇಷ ಸಂದರ್ಶನದಲ್ಲಿ, ಮಾಜಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿರುವನಂತಪುರಂನಲ್ಲಿ ಚುನಾವಣಾ ಸೋಲಿನ ನಂತರ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.  3 ಲಕ್ಷಕ್ಕೂ ಹೆಚ್ಚು ಜನರ ಬೆಂಬಲ ತಮಗೆ ಇತ್ತು ಎಂದು ಹೇಳಿದ್ದಾರೆ.
 


ತಿರುನವಂತಪುರಂ (ಜೂ.25): ಏಷ್ಯಾನೆಟ್ ನ್ಯೂಸ್‌ನ "ಅರೌಂಡ್ ಅಂಡ್ ಅಸೈಡ್" ವಿಶೇಷ ಸಂದರ್ಶನದಲ್ಲಿ, ಮಾಜಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿರುವನಂತಪುರಂನಲ್ಲಿ ಇತ್ತೀಚಿನ ಚುನಾವಣಾ ಹಿನ್ನಡೆಯ ಹೊರತಾಗಿಯೂ ತಮ್ಮ ಮುಂದಿನ ಯೋಜನೆಗಳ ಕುರಿತು ಚರ್ಚಿಸಿದರು. ಕೇರಳದ ರಾಜಧಾನಿಯಲ್ಲಿ 3,00,000 ಕ್ಕೂ ಹೆಚ್ಚು ಜನರ ಬೆಂಬಲವನ್ನು ಗಳಿಸಿದ್ದು ತಮಗೆ ಗೌರವದ ವಿಚಾರ ಎಂದಿದ್ದಾರೆ.

ತಿರುವನಂತಪುರಂನ ಜನರೊಂದಿಗೆ ಆ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ತಮಗೆ ರಾಜಕೀಯ ಎಂದರೆ 'ಸಾರ್ವಜನಿಕ ಸೇವೆ' ಎಂದು ಬಿಜೆಪಿ ನಾಯಕ ಪುನರುಚ್ಚರಿಸಿದ್ದಾರೆ.

ಇವಿಎಂ ತಿರುಚಬಹುದು: ಎಲಾನ್‌ ಮಸ್ಕ್‌ ನುಡಿ ಭಾರತದಲ್ಲಿ ಭಾರಿ ವಿವಾದ!

"ನಾನು 2006 ರಲ್ಲಿ ರಾಜಕೀಯಕ್ಕೆ ಬಂದಿದ್ದೆ.  ದೇಶ ಮತ್ತು ಜನರ ಸೇವೆ ಮಾಡುವ ನನ್ನ ಬಯಕೆಯ ವಿಸ್ತರಣೆಯಾಗಿ ಅದು ನನ್ನ ಡಿಎನ್‌ಎಯಲ್ಲಿ ಆಳವಾಗಿದೆ. ಹಾಗಾಗಿ ಚುನಾವಣೆಯಲ್ಲಿ ಗೆಲ್ಲುವುದು ಮತ್ತು ಸೋಲುವುದು ನನ್ನ ಬಯಕೆಯ ದೃಷ್ಟಿಯಿಂದ ಅಷ್ಟು ಮುಖ್ಯವಲ್ಲ.. ತಿರುವನಂತಪುರಂನ ಜನರ ಸೇವೆಯನ್ನು ಮುಂದುವರಿಸುವುದೇ ನನ್ನ ಗುರಿ ಎಂದು ಹೇಳಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮತ್ತು ತಿರುವನಂತಪುರಂ ಸೇರಿದಂತೆ ಎಲ್ಲಾ ರಾಜ್ಯಗಳ ಅಭಿವೃದ್ಧಿಯ ಸಂಪೂರ್ಣ ದೃಷ್ಟಿಕೋನವನ್ನು ಹೊಂದಿದ್ದಾರೆ" ಎಂದು ಅವರು ಈ ವೇಳೆ ತಿಳಿಸಿದ್ದಾರೆ.