ಯುವರಾಜನ ಬಾಳಲ್ಲಿ ಬಿರುಗಾಳಿ... ಅನರ್ಹತೆ ಬಗ್ಗೆ ಕಾನೂನು ಹೇಳೋದೇನು.?

 ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. ಮೋದಿ ಎಂಬ ಸರ್‌ನೇಮ್ ಇರುವವರು ಕಳ್ಳರು ಎಂಬಂತೆ ನೀಡಿದ್ದ ಒಂದು ಹೇಳಿಕೆಯಿಂದ ಕೈ ಯುವರಾಜನ ಸಂಕಷ್ಟ ಹೆಚ್ಚಿದ್ದೇಕೆ.? ರಾಹುಲ್ ಗಾಂಧಿ ಮುಂದಿರೋ ದಾರಿಗಳಾದ್ರೂ ಏನು? ಈ ವಿಡಿಯೋ ನೋಡಿ 

Share this Video
  • FB
  • Linkdin
  • Whatsapp

 ಜನಪ್ರತಿನಿಧಿ ಕಾಯ್ದೆಯ ನಿಯಮದಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. ಮೋದಿ ಎಂಬ ಸರ್‌ನೇಮ್ ಇರುವವರು ಕಳ್ಳರು ಎಂಬಂತೆ ನೀಡಿದ್ದ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಅದರ ವಿರುದ್ಧ ಗುಜರಾತ್ ಬಿಜೆಪಿ ಮುಖಂಡ ಪೂರ್ಣೇಶ್ ಮೋದಿ ಅವರು ನೀಡಿದ್ದ ದೂರಿನಂತೆ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ 2 ವರ್ಷ ಶಿಕ್ಷೆ ವಿಧಿಸಿತ್ತು.ಜನಪ್ರತಿನಿಧಿಗಳ ಕಾಯ್ದೆಯಡಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಗುರಿಯಾದವರು ಸಂಸದ ಅಥವಾ ಶಾಸಕ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಹಾಗೆಯೇ ಅವರ ಶಿಕ್ಷೆಯ ಅವಧಿ ಮುಗಿದ ಬಳಿಕವೂ ಆರು ವರ್ಷ ಅವರು ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಇನ್ನು 2 ವರ್ಷ ಜೈಲು ಶಿಕ್ಷೆಯ ಬೆನ್ನಲ್ಲೇ ಅನರ್ಹತೆ ಎದುರಾಗಿರುವ ರಾಹುಲ್ ಗಾಂಧಿ ಕತೆ ಮುಂದೆ ಏನಾಗಲಿದೆ? ಈ ವಿಡಿಯೋ ನೋಡಿ

Related Video