News Hour: ನಾಳೆ ರಾಮನೂರು ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ!
₹ 11,100 ಕೋಟಿಗೂ ಹೆಚ್ಚು ಮೊತ್ತದ ಬಹು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮುಂಚಿತವಾಗಿ ಅಯೋಧ್ಯೆಯನ್ನು ಹಿಂದು ಸಂಸ್ಕೃತಿಗೆ ತಕ್ಕಂತೆ ಅಲಂಕರಿಸಲಾಗಿದೆ.
ನವದೆಹಲಿ (ಡಿ.29): ನಾಳೆ ಐತಿಹಾಸಿಕ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಅಭಿವೃದ್ಧಿ ಪರ್ವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಅಯೋಧ್ಯೆ ಒಂದರಲ್ಲೇ ಬರೋಬ್ಬರಿ ₹11,100 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಾಳೆ ನಡೆಯಲಿದೆ. ಜೊತೆಗೆ ಉತ್ತರ ಪ್ರದೇಶದ ವಿವಿಧೆಡೆ 15,700 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಮಂದಿರ ಲೋಕಾರ್ಪಣೆ ದಿನ ಸಮೀಪಿಸುತ್ತಿದ್ದಂತೆ ಅಯೋಧ್ಯೆ ಸಂಪೂರ್ಣ ಕೇಸರಿ ಮಯವಾಗಿದೆ. ನಾಳೆ ಪ್ರಧಾನಿ ಮೋದಿ ನೇರವಾಗಿ ಹೊಸ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಮೋದಿ ಅವರ ವಿಮಾನ ಲ್ಯಾಂಡ್ ಆಗುವ ಮೂಲಕ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಚಾಲನೆ ಸಿಗಲಿದೆ. ಬಳಿಕ ಸಾವಿರಾರು ಕೋಟಿ ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಹೊಸ ಯೋಜನೆಗಳಿಗೆ ಶಂಕು ಸ್ಥಾಪನೆ ನಡೆಯಲಿದೆ.
ಅಯೋಧ್ಯೆಯಲ್ಲಿ 11 ಸಾವಿರ ಕೋಟಿಯ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ!
ಮೋದಿ, 240 ಕೋಟಿ ವೆಚ್ಚದ ಅಯೋಧ್ಯೆ ಧಾಮ್ ರೈಲು ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. 1,450 ಕೋಟಿ ವೆಚ್ಚದ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಿದ್ದಾರೆ.. 2 ಅಮೃತ್ ಭಾರತ್ ಎಕ್ಸ್‌ಪ್ರೆಸ್, 6 ವಂದೇ ಭಾರತ್ಗೆ ಸಹ ಮೋದಿ ಗ್ರೀನ್ಸಿಗ್ನಲ್ ನೀಡಲಿದ್ದು.. ಅಯೋಧ್ಯೆಯಲ್ಲಿ 2,180 ಕೋಟಿ ವೆಚ್ಚದ ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೆ ಸಹ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.. ಒಟ್ಟು 29 ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.