ದೇಶಕ್ಕೆ ಭಾರತ, ಇಂಡಿಯಾ ಹೆಸರು ಹೇಗೆ ಬಂತು? ಇದೀಗ ಬದಲಾವಣೆ ಚರ್ಚೆ ಯಾಕೆ?

ದೇಶದ ಹೆಸರು ಬದಲಿಸಲು ಸಂವಿಧಾನದಲ್ಲಿ ಅವಕಾಶವಿದೆಯಾ?, ಭಾರತ ಹೆಸರು ಉಲ್ಲೇಖಕ್ಕೆ ಕಾಂಗ್ರೆಸ್ ಕೆಂಡ, ಇಂಡಿಯಾ ಬದಲು ಭಾರತ ಎಂದು ಘೋಷಿಸಲು ವಿಶೇಷ ಅಧಿವೇಶನ? ಸೇರಿದಂತೆ ಇಂದಿನ ಇಡಿ  ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

 ಇಂಡಿಯಾ ಬದಲು ಭಾರತ. ಈ ಚರ್ಚೆ ಜೋರಾಗಿದೆ. ಕೇಂದ್ರ ಕರೆದಿರುವ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಭಾರತ ಎಂದು ಪ್ರಸ್ತಾಪಿಸುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹಾಗಾದರೆ ಭಾರತ ಹಾಗೂ ಇಂಡಿಯಾ ಹೆಸರು ಬಂದಿದ್ದು ಹೇಗೆ? ವಿಷ್ಣು ಪುರಾಣದಲ್ಲಿ ಭಾರತ ಅನ್ನೋ ಹೆಸರಿನ ಉಲ್ಲೇಖವಿದೆ. ಇದರ ಜೊತೆಗೆ ಭರತವರ್ಷ, ಭರತಖಂಡ, ಹಿಂದುಸ್ಥಾನ ಅನ್ನೋ ಹೆಸರುಗಳು ಭಾರತಕ್ಕಿದೆ. ಇಂಡಿಯಾ ಹೆಸರಿನ ಬದಲು ಇನ್ನು ಮುಂದೆ ಭಾರತ ಅನ್ನೋ ಹೆಸರು ಅಧಿಕೃತವಾಗಲಿದೆ ಅನ್ನೋ ಚರ್ಚೆ ಜೋರಾಗುತ್ತಿದೆ. ಆದರೆ ದೇಶದ ಹೆಸರು ಬದಲಿಸಲು ಸಂವಿಧಾನದಲ್ಲಿ ಅವಕಾಶವಿದೆಯಾ? ಜಾಗತಿಕ ಮಟ್ಟದಲ್ಲಿ ಇದಕ್ಕಿರುವ ಸವಾಲೇನು?

Related Video