ಚಿಂತೆ ಮಾಡೋ ಸಮಯ ಅಲ್ಲ, ಪಾಸಿಟಿವಿಟಿ ಬಗ್ಗೆ ಸದ್ಗುರು ಸಲಹೆ
ಈಗ ಕೊರೋನಾ ಇದೆ, ಇಲ್ಲದಿದ್ದರೆ ಇನ್ನೆರಡು ವಾರದಲ್ಲಿ ಪಾಸಿಟಿವ್ ಬರಬಹುದು. ಈಗ ಚಿಂತೆ ಮಾಡುವುದಲ್ಲ. ಬದಲಾಗಿ ಇಮ್ಯುನಿಟಿ ಹೆಚ್ಚಿಸುವ ರೀತಿ, ಆಹಾರ, ಕೊರೋನಾ ವಿರುದ್ಧ ಹೋರಾಡುವ ರೀತಿಯನ್ನು ತಿಳಿಸಿಕೊಡಬೇಕು ಎಂದಿದ್ದಾರೆ ಸದ್ಗುರು.
ಕೊರೋನಾ ಎರಡನೇ ಅಲೆಯಿಂದ ಭಾರತ ತತ್ತರಿಸಿದೆ. ರಾಷ್ಟ್ರ, ರಾಜ್ಯ ಸರ್ಕಾರದ ಸತತ ಪ್ರಯತ್ನಗಳ ನಂತರವೂ ಕೊರೋನಾ ಎರಡನೇ ಅಲೆಯನ್ನು ಎದುರಿಸಲು ಭಾರೀ ತೊಂದರೆ ಎದುರಾಗುತ್ತಿದೆ.
'ಪಾಸಿಟಿವ್ ಬದಲು ಪಾಸಿಟಿವ್ ಚಿಂತನೆ ಬೇಕಾಗಿದೆ' ದಿಗ್ಗಜರ ಮಾತು ಮಿಸ್ ಮಾಡ್ಬೇಡಿ!
ಈಗ ನಾವು ಕೊರೋನಾ ಎದುರಿಸಬೇಕಾದದ್ದು ಪಾಸಿಟಿವಿಟಿಯಿಂದ. ನಮ್ಮಲ್ಲಿ ಕೇಸ್‌ಗಳ ಸಂಖ್ಯೆ ಈಗ ಅರ್ಥ ಕಳೆದುಕೊಂಡಿದೆ. ಈಗ ಜನರಿಗೆ ಮುಖ್ಯವಾಗಿ ಮಾಹಿತಿ ಕೊಡಬೇಕಾಗಿದೆ. ನಮ್ಮಲ್ಲಿ ಜನರಿಗೆ ಮಾಹಿತಿ ಕೊಡಬೇಕಾದರೂ 24 ಭಾಷೆಗಳಲ್ಲಿ ತಿಳಿಸಬೇಕು. ಇದು ನಿಜಕ್ಕೂ ಕಷ್ಟ. ಸದ್ಯ ಟೆಸ್ಟ್ ಮಾಡುವುದು ಅಗತ್ಯವಿಲ್ಲ, ಕಾರಣ ಎಲ್ಲರಿಗೂ ಈಗ ಕೊರೋನಾ ಇದೆ, ಇಲ್ಲದಿದ್ದರೆ ಇನ್ನೆರಡು ವಾರದಲ್ಲಿ ಪಾಸಿಟಿವ್ ಬರಬಹುದು. ಈಗ ಚಿಂತೆ ಮಾಡುವುದಲ್ಲ. ಬದಲಾಗಿ ಇಮ್ಯುನಿಟಿ ಹೆಚ್ಚಿಸುವ ರೀತಿ, ಆಹಾರ, ಕೊರೋನಾ ವಿರುದ್ಧ ಹೋರಾಡುವ ರೀತಿಯನ್ನು ತಿಳಿಸಿಕೊಡಬೇಕು ಎಂದಿದ್ದಾರೆ ಸದ್ಗುರು.