Asianet Suvarna News Asianet Suvarna News

ರಾಜ್ಯಕ್ಕೂ ವ್ಯಾಪಿಸಿದ ‘ಅಗ್ನಿಪಥ’ ಕಿಚ್ಚು, ಏರಿತು ವಯೋಮಿತಿ! ಸಶಸ್ತ್ರ ಪಡೆಯಲ್ಲಿ ಮೀಸಲಾತಿ!

ಕೇಂದ್ರ ಸರ್ಕಾರದ ಅಗ್ನಿಪಥ್‌ ಯೋಜನೆ ವಿರೋಧಿಸಿ ದೇಶದ ವಿವಿಧೆಡೆ ನಡೆಯುತ್ತಿರುವ ಹೋರಾಟ ರಾಜ್ಯಕ್ಕೂ ವ್ಯಾಪಿಸಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. 

First Published Jun 19, 2022, 4:00 PM IST | Last Updated Jun 19, 2022, 3:59 PM IST

ಕೇಂದ್ರ ಸರ್ಕಾರದ ಅಗ್ನಿಪಥ್‌ ಯೋಜನೆ ವಿರೋಧಿಸಿ ದೇಶದ ವಿವಿಧೆಡೆ ನಡೆಯುತ್ತಿರುವ ಹೋರಾಟ ರಾಜ್ಯಕ್ಕೂ ವ್ಯಾಪಿಸಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿ, ಮೈಸೂರು, ಮದ್ದೂರುಗಳಲ್ಲಿ ಶಾಂತಿಯುತ ಹೋರಾಟಗಳು ನಡೆದಿದ್ದರೆ, ಧಾರವಾಡದಲ್ಲಿ ಮಾತ್ರ ಪ್ರತಿಭಟನೆ ಬಳಿಕ ಕಲ್ಲು ತೂರಾಟ ನಡೆದಿದ್ದು ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ 30 ಮಂದಿಯನ್ನು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನೈಋುತ್ಯ ರೈಲ್ವೆ ವಲಯ ಹುಬ್ಬಳ್ಳಿ ಶ್ರಿ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ಹೈ ಅಲರ್ಚ್‌ ಘೋಷಿಸಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ವಿರೋಧ ಯಾಕೆ.? 

ಕೋವಿಡ್‌ ಹಿನ್ನೆಲೆಯಲ್ಲಿ 2 ವರ್ಷದಿಂದ ದೇಶಾದ್ಯಂತ ಸೇನಾ ನೇಮಕಾತಿ ನಡೆದಿಲ್ಲ.  ಈಗ ಅಗ್ನಿಪಥ ಯೋಜನೆಯಡಿ ನೇಮಕವಾದರೆ ಸುದೀರ್ಘ ಉದ್ಯೋಗ ಅವಕಾಶವಿಲ್ಲ. ಹಿಂದಿನ ನೇಮಕಾತಿ ವೇಳೆ ಕನಿಷ್ಠ 14 ವರ್ಷ ಸೇವೆ, ಬಳಿಕ ಪಿಂಚಣಿ ಅವಕಾಶ ಇತ್ತು. ಹೊಸ ಯೋಜನೆಯಲ್ಲಿ ಸೇವಾ ಭದ್ರತೆ ಇಲ್ಲ, 4 ವರ್ಷ ಬಳಿಕ ಪಿಂಚಣಿಯೂ ಸಿಗದು. ರೆಜಿಮೆಂಟ್‌ ನೀತಿ ಬದಲಾದರೆ, ನೇಮಕದಲ್ಲಿ ಸ್ಥಳೀಯ ಪ್ರಾತಿನಿಧ್ಯ ರದ್ದಾಗುವ ಭೀತಿ ಕಾಡುತ್ತಿದೆ. ಇದು ನಿಜನಾ..? ಇದರ ರೂಪುರೇಷೆಗಳೇನು..? ಇಲ್ಲಿದೆ ಸವಿವರ