Asianet Suvarna News Asianet Suvarna News

ಅನ್‌ಲಾಕ್‌ 2.0?: ಇಂದು, ನಾಳೆ ಸಿಎಂಗಳ ಜತೆ ಮೋದಿ ಸಂವಾದ!

ನಮೋ ಅನ್‌ಲಾಕ್‌ 2.0?| ಇಂದು, ನಾಳೆ ಸಿಎಂಗಳ ಜತೆ ಮೋದಿ ಸಂವಾದ| ಕೊರೋನಾ ನಿಯಂತ್ರಣ, ಲಾಕ್‌ಡೌನ್‌ ಸಡಿಲಿಕೆ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ ಮಾತುಕತೆ| ನಾಳೆ ಸಭೆಯಲ್ಲಿ ಯಡಿಯೂರಪ್ಪ ಭಾಗಿ| ಏನು ನಿರ್ಧಾರ ಆಗುತ್ತೆ? ಭಾರೀ ಕುತೂಹಲ

ಬೆಂಗಳೂರು(ಜೂ.16): ದೇಶಾದ್ಯಂತ ಕೊರೋನಾ ಸೋಂಕು ಮೀತಿ ಮೀರಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹಾಗೂ ಬುಧವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಸಂವಾದ ಹಮ್ಮಿಕೊಂಡಿದ್ದಾರೆ.

ರಾಜ್ಯಗಳನ್ನು 2 ಗುಂಪುಗಳಾಗಿ ವಿಂಗಡಿಸಿದ್ದು ಮಂಗಳವಾರ 21 ಮತ್ತು ಬುಧವಾರ 15 ರಾಜ್ಯಗಳ ಮುಖ್ಯಮಂತ್ರಿಗಳು/ ರಾಜ್ಯಪಾಲರು ಇದರಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಲಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ನಡೆಸುತ್ತಿರುವ ಈ 6ನೇ ಸಂವಾದದಲ್ಲಿ ಅನ್‌ಲಾಕ್‌ 1ರ ಅವಧಿಯಲ್ಲಿ ದೇಶಾದ್ಯಂತ ಹೆಚ್ಚುತ್ತಿರುವ ಸೋಂಕು, ಸಾವಿನ ಪ್ರಮಾಣದ ಬಗ್ಗೆ ಗಮನ ಹರಿಸಲಾಗುವುದು. ಅದರಲ್ಲೂ ಹೆಚ್ಚಿನ ಸೋಂಕು, ಸಾವು ಕಂಡುಬಂದಿರುವ ರಾಜ್ಯಗಳು ಮತ್ತು ಮಹಾನಗರಗಳಲ್ಲಿನ ಹಾಲಿ ಪರಿಸ್ಥಿತಿ ಮತ್ತು ಮುಂದೆ ಸೋಂಕು ವ್ಯಾಪಕವಾಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ಸೋಂಕು ಸ್ಫೋಟದ ಖಚಿತ ಮಾಹಿತಿ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್‌, ವೈದ್ಯರ ಲಭ್ಯತೆ ಬಗ್ಗೆಯೂ ಪ್ರಧಾನಿ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.

Video Top Stories