Asianet Suvarna News Asianet Suvarna News

News Hour: ಕೆಂಪುಕೋಟೆಯಿಂದಲೇ ಯುಸಿಸಿ ಜಾರಿ ಶಪಥಗೈದ ಮೋದಿ!

Secular Civil Code ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದಲೇ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರಬಲವಾಗಿ ಭಾಷಣ ಮಾಡಿದ್ದಾರೆ. ಇದನ್ನು ಅವರು ಸೆಕ್ಯುಲರ್‌ ಸಿವಿಲ್‌ ಕೋಡ್‌ ಎಂದು ಕರೆದಿದ್ದಾರೆ.

First Published Aug 15, 2024, 11:53 PM IST | Last Updated Aug 15, 2024, 11:52 PM IST

ಬೆಂಗಳೂರು (ಆ.15): ದೇಶಾದ್ಯಂತ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಲಾಗಿದೆ. 11ನೇ ಬಾರಿ ಕೆಂಪುಕೋಟೆ ಮೇಲೆ ಮೋದಿ ಧ್ವಜಾರೋಹಣ ಮಾಡಿದ್ದು, ಈ ವೇಳೆ ದೇಶಕ್ಕೊಂದೇ ಕಾನೂನು ಎಂದು ಪ್ರಧಾನಿ ಶಪಥ ಕೈಗೊಂಡಿದ್ದಾರೆ.

ದೇಶಕ್ಕೆ ಈ ಹಂತದಲ್ಲಿ ಸೆಕ್ಯುಲರ್ ಸಿವಿಲ್ ಕೋಡ್ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ. PM ಮೋದಿ ಭಾಷಣಕ್ಕೆ ಅಲ್ಲಿಯೇ ಇದ್ದ ಸಿಜೆಐ ಚಂದ್ರಚೂಡ್ ಮುಗುಳ್ನಕ್ಕಿದ್ದಾರೆ. 1998ರಿಂದಲೇ ಬಿಜೆಪಿ ಪ್ರಣಾಳಿಕೆಯಲ್ಲಿ ಯುಸಿಸಿ ಜಾರಿಯ ಬಗ್ಗೆ ಪ್ರಸ್ತಾಪವಿದೆ.

ಸ್ವಾತಂತ್ರ್ಯೋತ್ಸವದಲ್ಲಿ ಸುದೀರ್ಘ ಭಾಷಣ ದಾಖಲೆ ಬರೆದ ಮೋದಿ: ಇಲ್ಲಿದೆ ಪ್ರಧಾನಿ ಗರಿಷ್ಠ ಸ್ಪೀಚ್ ಲಿಸ್ಟ್!

ವಕ್ಫ್​ ಬಳಿಕ ಏಕರೂಪ ನಾಗರಿಕ ಸಂಹಿತೆ ಜಾರಿ ಆಗುವ ಬಗ್ಗೆ ಮೋದಿ ಮಹತ್ವದ ಸುಳಿವು ನೀಡಿದ್ದಾರೆ. ಎನ್​ಡಿಎ ಮೈತ್ರಿ ಸರ್ಕಾರವಿದ್ರೂ ಯುಸಿಸಿ ಜಾರಿ ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ಇನ್ನೊಂದೆಡೆ,  ಮೋದಿ ಕಮ್ಯುನಲ್ ಕೋಡ್​ ಮಾತಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
 

Video Top Stories