
ಮೋದಿ-ಟ್ರಂಪ್ ಭೇಟಿಯಿಂದ ಬಾಂಗ್ಲಾದೇಶ ಆತಂಕ ಹೆಚ್ಚು, ಭಾರತಕ್ಕೆ ಪರಮಾಧಿಕಾರ
ಪ್ರಧಾನಿ ನರೇಂದ್ರ ಮೋದಿ ಭೇಟಿಯಲ್ಲಿ ನಡೆದ ಮಹತ್ವದ ಒಪ್ಪಂದಗಳೇನು? ಬಾಂಗ್ಲಾದೇಶ ಕುರಿತು ಟ್ರಂಪ್ ಭಾರತಕ್ಕೆ ಕೊಟ್ಟ ಪರಮಾಧಿಕಾರವೇನು? ಯತ್ನಾಳ್‌ಗೆ ನೀಡಿದ ನೋಟಿಸ್ ಏನಾಯ್ತು? ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಅಮೆರಿಕ ಪ್ರವಾಸದಲ್ಲಿ ಮಹತ್ವದ ಒಪ್ಪಂದಗಳಾಗಿದೆ. ವ್ಯಾಪಾರ, ರಕ್ಷಣೆ, ಉಗ್ರರ ವಿರುದ್ದ ಹೋರಾಟ ಸೇರಿದಂತೆ ಹಲವು ಕ್ಷೇತ್ರಗಳ ಕುರಿತು ಒಪ್ಪಂದ ಹಾಗೂ ಚರ್ಚೆ ನಡೆದಿದೆ. ಈ ಪೈಕಿ ಭಾರತದ ರಕ್ಷಣಾ ವ್ಯವಸ್ಥೆಗೆ ಅಮೆಪಿಕ ಎಫ್-35 ಫೈಟರ್ ಜೆಟ್ ನೀಡಲಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಫ್-35 ಫೈಟರ್ ಜೆಟ್ ಭಾರತದ ಬಲ ಹೆಚ್ಚಿಸಲಿದೆ. ಇದೇ ವೇಳೆ ಬಾಂಗ್ಲಾದೇಶ ಕುರಿತು ಡೋನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದ ವಿಚಾರದಲ್ಲಿ ಅಮೆರಿಕ ಮಧ್ಯಪ್ರವೇಶಿಸುವುದಿಲ್ಲ. ಬಾಂಗ್ಲಾದೇಶ ಕುರಿತ ನಿರ್ಧಾರವನ್ನು ಪ್ರಧಾನಿ ಮೋದಿ ತೆಗೆದುಕೊಳ್ಳಲಿದ್ದಾರೆ ಎಂದಿದ್ದಾರೆ.