ಆಯೋಧ್ಯೆಯಲ್ಲಿ ಶ್ರೀರಾಮೋತ್ಸವ ಆರಂಭ, ರಾಮ ಮಂದಿರದ 46 ಬಾಗಿಲಿಗೆ ಚಿನ್ನದ ಲೇಪನ!
ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಆಯೋಧ್ಯೆಯಿಂದ ನ್ಯೂಸ್ ಹವರ್ ನೇರಪ್ರಸಾರ ಮಾಡುತ್ತಿದೆ. ಆಯೋಧ್ಯೆಯಲ್ಲಿ ಶ್ರೀರಾಮೋತ್ಸವ, ಪ್ರಧಾನಿ ನರೇಂದ್ರ ಮೋದಿ ಲೇಪಾಕ್ಷಿ ಸೇರಿ ದಕ್ಷಿಣ ಭಾರತ ಪ್ರವಾಸ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ಇಲ್ಲಿದೆ.
ಆಯೋಧ್ಯೆ(ಜ.16) ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ. ಇದೀಗ ಆಯೋಧ್ಯೆಯಲ್ಲಿ ಶ್ರೀರಾಮೋತ್ಸವ ಆರಂಭಗೊಂಡಿದೆ. ಇಂದಿನಿಂದಲೇ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಜ.16ರಿಂದ ಜನವರಿ 22ರ ಪ್ರಾಣಪ್ರತಿಷ್ಠೆ ವರೆಗೆ ವಿಶೇಷ ಪೂಜೆಗಳು ನಡೆಯಲಿದೆ. ಶ್ರೀರಾಮ ಮಂದಿರದ 46 ಬಾಗಿಲುಗಳಿಗೆ ಚಿನ್ನದ ಲೇಪನ ಮಾಡಲಾಗುತ್ತಿದೆ.ಇದಕ್ಕಾಗಿ ಟ್ರಸ್ಟ್ 60 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇತ್ತ ಆಯೋಧ್ಯೆಯಲ್ಲಿ ಹೊಟೆಲ್ ರೂಂ ಸಂಪೂರ್ಣ ಬುಕ್ ಆಗಿರುವ ಕಾರಣ ಟೆಂಟ್ ಸಿಟಿ ನಿರ್ಮಾಣ ಮಾಡಲಾಗಿದೆ. ಇತ್ತ ಪ್ರಾಣಪ್ರತಿಷ್ಠೆ ಮಾಡಲಿರುವ ಪ್ರಧಾನಿ ಮೋದಿ ಲೇಪಾಕ್ಷಿ , ವೀರಭದ್ರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.