Statue Of Equality: ಫೆ.5ರಂದು ಮೋದಿಯಿಂದ ರಾಮಾನುಜಂ ಬೃಹತ್ ಪ್ರತಿಮೆ ಅನಾವರಣ

ಜಗತ್ತಿಗೆ ಸಮಾನತೆಯ ಪಾಠ ಹೇಳಿದ ರಾಮಾನುಜಾಚಾರ್ಯರ 1000ನೇ ಜಯಂತಿಯ ಅಂಗವಾಗಿ ಶಂಶಾ‌ಬಾದ್‌ನಲ್ಲಿ ಅವರ 216 ಅಡಿ ಎತ್ತರದ ಪ್ರತಿಮೆಯನ್ನು ಫೆ.5ರಂದು ಪ್ರಧಾನಿ ಮೋದಿ ಅನಾವರಣ ಮಾಡುತ್ತಿದ್ದಾರೆ. 

First Published Feb 3, 2022, 2:30 PM IST | Last Updated Feb 3, 2022, 2:30 PM IST

11ನೇ ಶತಮಾನದ ಸಂತ, ವಿಶಿಷ್ಠಾದ್ವೈತ ಪ್ರತಿಪಾದಕ, ಹಿಂದೂ ವೇದಾಂತ ತತ್ವಜ್ಞಾನಿ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿ ಫೆ.5ರಂದು ಶಂಶಾಬಾದ್‌ನಲ್ಲಿ ಲೋಕಾರ್ಪಣೆ ಮಾಡುತ್ತಿದ್ದಾರೆ. 
ಹೈದರಾಬಾದ್‌ನ ರಂಗಾರೆಡ್ಡಿ ಜಿಲ್ಲೆಯ ಶಂಶಾಬಾದ್‌ನಲ್ಲಿ ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಆಶ್ರಮದಲ್ಲಿ ರಾಮಾನುಜಂ ಅವರ ಗೌರವಾರ್ಥವಾಗಿ ದೇವಾಲಯ ಹಾಗೂ ಪ್ರತಿಮೆಯನ್ನು ನಿರ್ಮಿಸಲಾಗಿದೆ. ರಾಮಾನುಜಂ ಅವರ 1000 ವರ್ಷದ ಜಯಂತಿ ಹಿನ್ನೆಲೆಯಲ್ಲಿ ಪ್ರತಿಮೆ ಅನಾವರಣ ಕಾರ್ಯ ನಡೆಯುತ್ತಿದೆ. ಇದು ಭಾರತದ ಎರಡನೇ ಅತಿ ಎತ್ತರದ ಪ್ರತಿಮೆಯಾಗಿದ್ದು, ಇದಕ್ಕೆ ಸಮತಾ ಪ್ರತಿಮೆ ಎಂದು ಹೆಸರಿಡಲಾಗಿದೆ. 

Pak-China Remark: ರಾಹುಲ್ ಗಾಂಧಿ ಹೇಳಿಕೆಗೆ ನಮ್ಮ ಬೆಂಬಲವಿಲ್ಲ ಎಂದ ಅಮೆರಿಕ!

ಸಾವಿರ ವರ್ಷಗಳ ಹಿಂದೆಯೇ ವೈಷ್ಣವ ಸಂತ ರಾಮಾನುಜಾಚಾರ್ಯರು ಅಸ್ಪರ್ಶತೆ ತೊಡೆದು ಹಾಕಿದವರು. ಹಿಂದುಳಿದ ವರ್ಗದವರಿಗೆ ದೇವಾಲಯ ಪ್ರವೇಶ ಮಾಡಿಸಿ, ಅವರನ್ನು ಉತ್ತಮ ಕುಲದವರೆಂದು ಕರೆದವರು. ಜಾತಿ, ಮತ, ಲಿಂಗ ಭೇದವನ್ನು ಖಂಡಿಸಿದವರು. ಸಮಾನತೆಯ ಹರಿಕಾರರಾಗಿದ್ದ ಅವರ ಈ ಮೂರ್ತಿಯ ವಿಶೇಷಗಳೇನು ಎಂಬ ಕುರಿತ ವಿವರಣೆ ಇಲ್ಲಿದೆ.