ಒಂದು ದಿನ ಮುಂಚಿತವಾಗಿ ಆಯೋಧ್ಯೆಗೆ ಮೋದಿ, ಬೆಳ್ಳಂಬೆಳಗ್ಗೆ ಸರಯು ನದಿಯಲ್ಲಿ ಸ್ನಾನ!

500 ವರ್ಷಗಳ ಬಳಿಕ ಜನ್ಮಸ್ಥಾನಕ್ಕೆ ಮರಳಿದ ರಾಮಲಲ್ಲಾ, ಪವಿತ್ರ ಆಯೋಧ್ಯೆ ರಾಮ ಮಂದಿರದಲ್ಲಿ ಕನ್ನಡಿಗರ ಕಲರವ,  ಒಂದು ದಿನ ಮುಂಚಿತವಾಗಿ ಆಯೋಧ್ಯೆಗೆ ತೆರಳಲಿದ್ದಾರೆ ಮೋದಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Jan 18, 2024, 10:58 PM IST | Last Updated Jan 18, 2024, 10:58 PM IST

ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ತಯಾರಿ ನಡೆಯುತ್ತಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಜನವರಿ 22ರಂದು ಆಯೋಧ್ಯೆಗೆ ಮೋದಿ ಆಗಮಿಸುವ ವೇಳಾಪಟ್ಟಿ ನಿಗಧಿಯಾಗಿತ್ತು. ಆದರೆ ಇದೀಗ ಪ್ರಧಾನಿ ಮೋದಿ ಒಂದು ದಿನ ಮುಂಚಿತವಾಗಿ ಆಯೋಧ್ಯೆಗೆ ತೆರಳುತ್ತಿದ್ದಾರೆ. ಜನವರಿ 21ರಂದು ರಾಮ ಮಂದಿರದಲ್ಲಿ ನಡೆಯಲಿರುವ ಪೂಜೆಯಲ್ಲಿ ಯಜಮಾನನ ಸ್ಥಾನದಲ್ಲಿ ನಿಂತು ಮೋದಿ ಪಾಲ್ಗೊಳ್ಳಲಿದ್ದಾರೆ. ಕೊರೆವ ಚಳಿಯಲ್ಲಿ ಬೆಳ್ಳಂಬೆಳಗ್ಗೆ ಸರಯು ನದಿಯಲ್ಲಿ ಮೋದಿ ಸ್ನಾನ ಮಾಡಿ ನದಿಯ ಪವಿತ್ರ ನೀರನ್ನು ರಾಮ ಮಂದಿರಕ್ಕೆ ತರಲಿದ್ದಾರೆ.  

Video Top Stories