Asianet Suvarna News Asianet Suvarna News

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ 2 ವಿಶೇಷ ಗಿಫ್ಟ್‌: 2 ಪ್ರಮುಖ ಯೋಜನೆಗಳಿಗೆ 'ನಮೋ' ಚಾಲನೆ

ಪ್ರಧಾನಿ ಮೋದಿ ತಮ್ಮ 73ನೇ ಹುಟ್ಟುಹಬ್ಬದಂದು ದೇಶದ ಜನತೆಗೆ ಕೊಡುಗೆಗಳನ್ನು ನೀಡಿದ್ದಾರೆ.

ಸೆಪ್ಟೆಂಬರ್ 17 ಪ್ರಧಾನಿ ಮೋದಿ ಹುಟ್ಟುಹಬ್ಬ. ಆದರೂ, ಇಂದು 2 ಪ್ರಮುಖ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ದ್ವಾರಕಾ ಸೆಕ್ಟರ್‌ 21ರಲ್ಲಿ ದೆಹಲಿ ಮೆಟ್ರೋ ಎಕ್ಸ್‌ಪ್ರೆಸ್‌ ಲೈನ್‌ಗೆ ಮೋದಿ ಚಾಲನೆ ನೀಡಿದ್ರು. ಅಲ್ಲದೆ, ದೆಹಲಿಯ ದ್ವಾರಕಾದಲ್ಲಿನ ಯಶೋಭೂಮಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅಂತಾರಾಷ್ಟ್ರೀಯ ಕನ್ವೆನ್ಷನ್‌ ಸೆಂಟರ್‌ ಅನ್ನು ಉದ್ಘಾಟನೆ ಮಾಡಿದ್ದು, ಈ ಮೂಲಕ ತಮ್ಮ 73ನೇ ಹುಟ್ಟುಹಬ್ಬಕ್ಕೆ ದೇಶದ ಜನತೆಗೆ ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೆ, ವಿಶ್ವಕರ್ಮ ಯೋಜನೆಗೂ ಸಹ ಚಾಲನೆ ನೀಡಲಿದ್ದಾರೆ.