ಮೋದಿ ಸೈಲೆಂಟ್? ಸಾಲು ಸಾಲು ಗಲಭೆ ವಿಚಾರದಲ್ಲಿ ಮೋದಿ ಮೌನ ಯಾಕೆ?

ಇಡೀ ದೇಶದಲ್ಲೇ ಸಾಲು ಸಾಲು ಗಲಭೆಗಳು ಉಂಟಾಗ್ತಿದ್ದಾವೆ.. ನಮ್ಮ ಕಣ್ಣೆದುರಲ್ಲೇ ಹಿಜಾಬ್ ವಿವಾದದಿಂದ ಶುರುವಾದ ಧರ್ಮ ದಂಗಲ್ ಇವತ್ತು, ದೇಶವನ್ನೆಲ್ಲಾ ವ್ಯಾಪಿಸಿಕೊಂಡಿದೆಯೇನೋ ಅನ್ನೋ ಅನುಮಾನ ಮೂಡುತ್ತಿದೆ.

Share this Video
  • FB
  • Linkdin
  • Whatsapp

ನವದೆಹಲಿ(ಏ.18): ರಾಮನವಮಿ ಮೆರವಣಿಗೆ ವೇಳೆ, ಬರೀ ಮಧ್ಯಪ್ರದೇಶ ಮಾತ್ರವೇ ಅಲ್ಲ. ಒಡಿಸಾದ ಜೋಡಾದಲ್ಲೂ ಗಲಾಟೆಯಾಗಿತ್ತು. ಮಧ್ಯ ಪ್ರದೇಶ, ಯುಪಿ, ಒಡಿಸಾ, ಈ ಮೂರು ರಾಜ್ಯಗಳು ಸೇರಿ, ಬರೋಬ್ಬರಿ 130 ಕಡೆಗಳಲ್ಲಿ ದೌರ್ಜನ್ಯ ನಡೆದಿತ್ತು.. ಅದರ ಬೆನ್ನಲ್ಲೇ ಗುಜರಾತಿನಲ್ಲೂ ಇಂಥದ್ದೇ ಅವಘಡ ಸಂಭವಿಸಿದೆ ಅನ್ನೋ ವರದಿಯೂ ಹೊರಬಂದಿತ್ತು.. ಇದಿಷ್ಟೇ ಅಲ್ಲದೆ, ಗೋವಾ, ರಾಜಸ್ಥಾನ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಸಹ ರಾಮನವಮಿ ದಿನವೇ ಹಿಂಸಾಚಾರ ನಡೆದ ಪ್ರಕರಣಗಳೂ ಬಯಲಿಗೆ ಬಂದು ಮತ್ತಷ್ಟು ಆತಂಕ ಮೂಡಿಸಿತ್ತು.

ಅದರ ಬೆನ್ನಲ್ಲೇ ಈಗ ಮತ್ತೆ, ಆಂಧ್ರ ಪ್ರದೇಶದಲ್ಲಿ ಹನುಮ ಜಯಂತಿಯಂದೂ ಕೂಡ ಇದೇ ಥರ ಹತ್ತಾರು ಕಡೆ ಗಲಭೆಗಳಾಗಿದ್ದಾವೆ ಅಂತ ವರದಿಯಾಗಿದೆ.. ಇತ್ತೀಚೆಗೆ ದೇಶದ ಹಲವು ಭಾಗಗಳಲ್ಲಿ ಕೋಮು ಸೌಹಾರ್ದ ಕದಡುವಂತಹ ಘಟನೆಗಳು ನಡೆಯುತ್ತಲೇ ಇವೆ.. ಅದರ ಮುಂದುವರೆದ ಭಾಗ ಅನ್ನೋ ಹಾಗೆ, ಹನುಮ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಶೋಭಾಯಾತ್ರೆ ವೇಳೆ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಕಲ್ಲು ತೂರಾಟ ಸಂಭವಿಸಿದೆ. ಹೀಗಿದ್ದರೂ ಈ ಎಲ್ಲಾ ವಿಚಾರಗಳ ಬಗ್ಗೆ ಪಿಎಂ ಮೋದಿ ಸೈಲೆಂಟ್ ಆಗಿದ್ದಾರೆ

Related Video