Asianet Suvarna News Asianet Suvarna News

ರೈತ ದರ್ಶನ ನನ್ನ ಸೌಭಾಗ್ಯ: ಕಿಸಾನ್ ಸಮ್ಮಾನ್ ಹಣ ಬಿಡುಗಡೆ ಮಾಡಿದ ಮೋದಿ!

Jan 2, 2020, 6:45 PM IST

ತುಮಕೂರು(ಜ.02): ಹೊಸ ವರ್ಷದ ಆರಂಭದಲ್ಲಿ ದೇಶದ ರೈತರನ್ನು ದರ್ಶಿಸಿದ್ದು ನನ್ನ ಸೌಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದರು. ತುಮಕೂರಿನಲ್ಲಿ ರೈತ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೃಷಿಯನ್ನು ಮುನ್ನಡೆಸಿದ ರೈತ ಭಾಂಧವರನ್ನ ಸನ್ಮಾನಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.  ದೇಶದಲ್ಲಿ ಕೃಷಿ ಆಂದೋಲನ ಶುರುವಾಗಿದ್ದು, ದೇಶದ ಬೆನ್ನೆಲುಬಾಗಿರುವ ರೈತ ಸಮುದಾಯದೊಂದಿಗೆ ಕೇಂದ್ರ ಸರ್ಕಾರ ದೃಢವಾಗಿ ನಿಂತಿದೆ ಎಂದು ಹೇಳಿದರು. ಈ ವೇಳೆ ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ ಸುಮಾರು 6 ಕೋಟಿ ರೈತರ ಅಕೌಂಟ್‌ಗೆ ತಲಾ 2 ಸಾವಿರ ರೂ.ನಂತೆ ಒಟ್ಟು 12 ಸಾವಿರ ಕೋಟಿ ರೂ. ಸಹಾಯಧನ  ನೀಡಲಾಯಿತು. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...