ಮೋದಿಗೆ ಈಗ 777 ಪ್ರೊಟೆಕ್ಷನ್; ಮಿಸೈಲ್ ದಾಳಿಯಾದ್ರೂ ಏನೂ ಆಗಲ್ಲ, ಹಾಗಿದೆ ವಿಮಾನದ ಫೀಚರ್ಸ್!

ಪ್ರಧಾನಿ ನರೇಂದ್ರ ಮೋದಿ ರಕ್ಷಣೆಗೆ, ಓಡಾಟಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಮಾನವೊಂದು ಅಮೆರಿಕದಿಂದ ಗುರುವಾರ ದೆಹಲಿಗೆ ಬಂದಿಳಿದಿದೆ. ಕ್ಷಿಪಣಿ ದಾಳಿ ನಡೆದರೂ ಜಗ್ಗದ ಈ ವಿಮಾನ ಅಮೆರಿಕ ಅಧ್ಯಕ್ಷರು ಬಳಸುವ ‘ಏರ್‌ಫೋರ್ಸ್‌ ಒನ್‌’ ರೀತಿಯೇ ಭದ್ರತಾ ಸೌಕರ್ಯ ಹೊಂದಿದೆ. ಇದನ್ನು ‘ಏರ್‌ ಇಂಡಿಯಾ ಒನ್‌’ ಎಂದು ಸಂಬೋಧಿಸಲಾಗುತ್ತದೆ.
 

First Published Oct 3, 2020, 3:03 PM IST | Last Updated Oct 3, 2020, 3:12 PM IST

ಬೆಂಗಳೂರು (ಅ. 03): ಪ್ರಧಾನಿ ನರೇಂದ್ರ ಮೋದಿ ರಕ್ಷಣೆಗೆ, ಓಡಾಟಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಮಾನವೊಂದು ಅಮೆರಿಕದಿಂದ ಗುರುವಾರ ದೆಹಲಿಗೆ ಬಂದಿಳಿದಿದೆ. ಕ್ಷಿಪಣಿ ದಾಳಿ ನಡೆದರೂ ಜಗ್ಗದ ಈ ವಿಮಾನ ಅಮೆರಿಕ ಅಧ್ಯಕ್ಷರು ಬಳಸುವ ‘ಏರ್‌ಫೋರ್ಸ್‌ ಒನ್‌’ ರೀತಿಯೇ ಭದ್ರತಾ ಸೌಕರ್ಯ ಹೊಂದಿದೆ. ಇದನ್ನು ‘ಏರ್‌ ಇಂಡಿಯಾ ಒನ್‌’ ಎಂದು ಸಂಬೋಧಿಸಲಾಗುತ್ತದೆ.

ಅಟಲ್ ಸುರಂಗ ಮಾರ್ಗದಿಂದ ಅಭಿವೃದ್ಧಿ ದ್ವಾರ ತೆರೆದಿದೆ: ಮೋದಿ

ಬಿ777 ಎಂಬ ಹೆಸರಿನ ಈ ವಿಮಾನಗಳು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಿದೆ. ‘ಲಾಜ್‌ರ್‍ ಏರ್‌ಕ್ರಾಫ್ಟ್‌ ಇನ್‌ಫ್ರಾರೆಡ್‌ ಕೌಂಟರ್‌ಮೆಸ​ರ್‍ಸ್’ (ಲೆಎಐಆರ್‌ಸಿಎಂ) ಹಾಗೂ ‘ಸೆಲ್ಪ್‌ ಪ್ರೊಟೆಕ್ಷನ್‌ ಸೂಟ್ಸ್‌’ (ಎಸ್‌ಪಿಎಸ್‌)ಗಳು ಈ ವಿಮಾನದಲ್ಲಿದ್ದು, ಸಮಾಜ ವಿದ್ರೋಹಿ ಶಕ್ತಿಗಳು ಹೆಗಲ ಮೇಲಿಟ್ಟು ನಡೆಸುವ ಕ್ಷಿಪಣಿ ದಾಳಿಯಿಂದ ರಕ್ಷಣೆ ಒದಗಿಸಲಿದೆ. ಅತ್ಯಾಧುನಿಕ ಈ ವಿಮಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ!