ಗರೀಬಿ ಹಠಾವೋ ಘೋಷಣೆ ಕೇಳಿದ್ದೆವು, ಇದೀಗ 25 ಕೋಟಿ ಬಡನತದಿಂದ ಮುಕ್ತ, ಕಾಂಗ್ರೆಸ್ ತಿವಿದ ಮೋದಿ
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಿಸಿದ್ದಾರೆ. ಖಡಕ್ ತಿರುಗೇಟು ನೀಡಿದ್ದಾರೆ. ಮೋದಿ ಪ್ರಸ್ತಾಪಿಸಿದ ವಿಚಾರಗಳೇನು?
ನವದೆಹಲಿ(ಫೆ.04) ಐದೈದು ದಶಕಗಳಿಂದ ಗರೀಬಿ ಹಠಾವೋ ಘೋಷಣೆ ಕೇಳಿದ್ದೆವು. ಆದರೆ ಬಡವರು ಬಡವರಾಗಿಯೇ ಉಳಿದಿದ್ದರು. ಇದೀಗ 25 ಕೋಟಿ ಮಂದಿ ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡುತ್ತಾ, ಕಾಂಗ್ರೆಸ್ ಪಕ್ಷವನ್ನು ಕುಟುಕಿದ್ದಾರೆ.ದೇಶದ ಜನರು ನಮಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಯೋಜನಾ ಬದ್ಧವಾಗಿ, ಸಮರ್ಪಣಾ ಭಾವದಿಂದ ಕೆಲಸ ಮಾಡಿದರೆ ಎಲ್ಲವೂ ಸಾಧ್ಯ ಎಂದಿದ್ದಾರೆ.