Asianet Suvarna News Asianet Suvarna News

ಕೃಷಿ ಉತ್ಪಾದಕತೆ, ರೈತರ ಆದಾಯ ಹೆಚ್ಚಿಸಲು ನಿರಂತರ ಕೆಲಸ; ರಾಜ್ಯಸಭೆಯಲ್ಲಿ ಶೋಭಾ ಕರಂದ್ಲಾಜೆ ಉತ್ತರ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಉತ್ಪಾದಕತೆ ಹಾಗೂ ರೈತರ ಆದಾಯ ಹೆಚ್ಚಿಸಲು ನಿರಂತರ ಕೆಲಸ ಮಾಡುತ್ತಿದೆ ಎಂದು  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೃಷಿಗೆ ಪ್ರತ್ಯೇಕ ವಾರ್ಷಿಕ ಬಜೆಟ್ ಕುರಿತು ರಾಜ್ಯ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಕೃಷಿ ಬಜೆಟ್ ಹೆಚ್ಚಳ ಹಾಗೂ ಇದರಿಂದ ರೈತರಿಗೆ ಆಗುತ್ತಿರುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ನವದೆಹಲಿ(ಆ.06): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಉತ್ಪಾದಕತೆ ಹಾಗೂ ರೈತರ ಆದಾಯ ಹೆಚ್ಚಿಸಲು ನಿರಂತರ ಕೆಲಸ ಮಾಡುತ್ತಿದೆ ಎಂದು  ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೃಷಿಗೆ ಪ್ರತ್ಯೇಕ ವಾರ್ಷಿಕ ಬಜೆಟ್ ಕುರಿತು ರಾಜ್ಯ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಕೃಷಿ ಬಜೆಟ್ ಹೆಚ್ಚಳ ಹಾಗೂ ಇದರಿಂದ ರೈತರಿಗೆ ಆಗುತ್ತಿರುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

2013-14ರಿಂದ, ಕೃಷಿ ಬಜೆಟ್ ಅನ್ನು 21,933.50 ಕೋಟಿ ರೂಪಾಯಿಗಳಿಂದ  ಇದೀಗ 2021-22ರ ಸಾಲಿಗೆ 1,23,017.57 ಕೋಟಿ ರೂಪಾಯಿಗೆ ಹೆಚ್ಚಿಸಿದೆ. ಕೃಷಿ ಬಜೆಟ್ ಗಾತ್ರದಲ್ಲಿ ಬರೋಬ್ಬರಿ 460% ಹೆಚ್ಚಳವಾಗಿದೆ. ಎಂದು ಕರಂದ್ಲಾಜೆ ಹೇಳಿದರು