ಪೆಹಲ್ಗಾಂ ಪ್ರತೀಕಾರಕ್ಕೆ ಪ್ರಧಾನಿ ಮೋದಿ ಸರಣಿ ಸಭೆ, ಸೇನೆ ಜೊತೆಗೆ ನಿರಂತರ ಸಂಪರ್ಕ

ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ ತೀರಿಸುವುದಾಗಿ ಭಾರತ ಹೇಳಿದೆ. ಇದರಂತೆ ಪ್ರಧಾನಿ ಮೋದಿ ಇಂದು ಸೇನಾ ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿದ್ದಾರೆ. ರಷ್ಯಾ ಸೇರಿದಂತೆ ಕೆಲ ಪ್ರಮುಖ ನಾಯಕರು ಮೋದಿಗೆ ಬೆಂಬಲ ಸೂಚಿಸಿದ್ದಾರೆ.

Share this Video
  • FB
  • Linkdin
  • Whatsapp

ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರದ ಮಾತು ಭಾರತದ ಎಲ್ಲೆಡೆಯಲ್ಲಿ ಕೇಳಿಬರುತ್ತಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖ ನಾಯಕರು ಪ್ರತೀಕಾರ ತೀರಿಸುತ್ತೇವೆ ಎಂದಿದ್ದಾರೆ. ಇದರಂತೆ ಪ್ರಧಾನಿ ಮೋದಿ ಇಂದು ಸೇನಾಧಿಕಾರಿಗಳು, ರಾಷ್ಟ್ರೀಯ ಭದ್ರತಾ ಸಮಿತಿ ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿದ್ದಾರೆ. ಇಷ್ಟೇ ಅಲ್ಲ ಸೇನಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ, ಪಾಕಿಸ್ತಾನ ಆರ್ಥಿಕ ನೆರವಿಗೆ ಬ್ರೇಕ್ ಹಾಕಲು ರಣತಂತ್ರ ಸೇರಿದಂತೆ ಇಂದಿನ ಬೆಳವಣಿಗೆಯ ಸಂಪೂರ್ಣ ಅಪ್‌ಡೇಟ್ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Related Video