ಕೆಲ ಪ್ರಧಾನಿಗಳನ್ನು ನೋಡಿದ್ದೇನೆ ಆದ್ರೆ ಸಮಸ್ಯೆಗೆ ಸ್ಪಂದಿಸುವ ಏಕೈಕ ಪಿಎಂ ಮೋದಿ, ದೇವೇಗೌಡ ಭಾಷಣ!

ಕಾಂಗ್ರೆಸ್ ಗ್ಯಾರೆಂಟಿಯಿಂದ ಜನ ಪರದಾಡುತ್ತಿದ್ದಾರೆ. ಇತ್ತ ಮೋದಿ  ತಮ್ಮ ಗ್ಯಾರೆಂಟಿ ಮೂಲಕ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ನಾನು ಹಲವು ಪ್ರಧಾನಿಗಳನ್ನು ನೋಡಿದ್ದೇನೆ. ಆದರೆ ಮೋದಿ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಪ್ರಧಾನಿ ಎಂದು ದೇವೇಗೌಡ ಹೇಳಿದ್ದಾರೆ.  
 

First Published Feb 7, 2024, 6:38 PM IST | Last Updated Feb 7, 2024, 6:38 PM IST

ನನಗೆ 91 ವರ್ಷ. ನನ್ನ ರಾಜಕೀಯ ಜೀವನದಲ್ಲಿ ಹಲವು ಪ್ರಧಾನಿಗಳನ್ನು ಹತ್ತಿರದಿಂದ ನೋಡಿದ್ದೇನೆ. ಆದರೆ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ದೇವೇಗೌಡ, ಕಾಂಗ್ರೆಸ್ ಗ್ಯಾರೆಂಟಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ವೇಳೆ ಕಾಡುಗೊಲ್ಲ ಸಮುದಾಯವನ್ನು ಗುರುತಿಸಿ ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನನ್ನ ಮನವಿಯನ್ನು ತಕ್ಷಣ ಸ್ಪಂದಿಸಿದ್ದರು ಎಂದು ದೇವೇಗೌಡ ಹೇಳಿದ್ದಾರೆ. ದೇವೇಗೌಡ ರಾಜ್ಯಸಭೆಯಲ್ಲಿ ಮಾಡಿದ ಭಾಷಣದ ವಿಡಿಯೋ ಇಲ್ಲಿದೆ. 

Video Top Stories