News Hour: ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ದಾಳಿಗೆ ಹಣದ ಮೂಲ ಯಾವುದು?
ಸಂಸತ್ ಮೇಲಿನ ದಾಳಿ ಪ್ರಕರಣದ ವಿಚಾರಣೆ ಜೋರಾಗಿ ನಡೆಯುತ್ತಿದೆ. ಈ ಹಂತದಲ್ಲಿ ಸ್ಮೋಕ್ ಬಾಂಬ್ ದಾಳಿ ಮಾಡಿದ ಆಗುಂತಕರ ಹಣದ ಮೂಲ ಯಾವುದು ಅನ್ನೋದನ್ನ ಅಧಿಕಾರಿಗಳು ಪತ್ತೆ ಮಾಡಲು ಆರಂಭಿಸಿದ್ದಾರೆ.
ಬೆಂಗಳೂರು (ಡಿ.15): ಸಂಸತ್ ಮೇಲೆ ಸ್ಮೋಕ್ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಲಲಿತ್ ಝಾ ಸರೆಂಡರ್ ಆಗಿದ್ದಾನೆ. ಸಂಚುಕೋರನ ಪ್ಲಾನ್ ಬಿ ಕೇಳಿ ದೆಹಲಿ ಪೊಲೀಸರು ಹೌಹಾರಿದ್ದಾರೆ. 7 ದಿನ ಕಸ್ಟಡಿಗೆ ಪಡೆದು ಹಣದ ಮೂಲಕ್ಕಾಗಿ ಶೋಧ ನಡೆಸಲಾಗುತ್ತಿದೆ.
ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಎಸೆದ ಕರ್ನಾಟಕದ ಮೈಸೂರಿನ ಮನೋರಂಜನ್ ಅವರ ನಿವಾಸದಲ್ಲಿ ಮೂರನೇ ದಿನವೂ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಮನೋರಂಜನ್ ಕೋಣೆಯನ್ನು ಸೀಲ್ ಮಾಡಿ ಗುಪ್ತಚರ ಅಧಿಕಾರಿಗಳಿಗೆ ನೀಡಲಾಗಿದೆ ಎನ್ನುವ ವರದಿ ಇದೆ.
ಸೈಲೆಂಟ್ ಆಗಿ ಎದುರಾಳಿಯ ನೆಲ ಧ್ವಂಸ ಮಾಡಲಿದೆ ಮಾರಕ ದೇಶಿ ಡ್ರೋನ್, ಚಿತ್ರದುರ್ಗದಲ್ಲಿ ನಡೆಯಿತು ಪರೀಕ್ಷೆ!
ಸಂಸತ್ ದಾಳಿಯನ್ನೂ ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಅಮಿತ್ ಶಾ ಖಾಸಗಿ ಟಿವಿಯ ಸಂವಾದದಲ್ಲಿ ಮಾತನಾಡಿದ್ದು, ಸಂಸತ್‌ನಲ್ಲಿ ಇಂಥ ಘಟನೆಗಳು 40ಕ್ಕೂ ಅಧಿಕ ಬಾರಿ ಆಗಿದೆ. ಆ ಸಂದರ್ಭದಲ್ಲಿ ಸ್ಪೀಕರ್‌ಗಳೇ ತಮ್ಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.