Punjab Elections: ಮೋದಿ 'ಶಬ್ಧ ಕೀರ್ತನೆ' ಹಿಂದಿದ್ಯಾ ಪಂಜಾಬ್ ಮತಬೇಟೆ ರಹಸ್ಯ?

ದೆಹಲಿಯ ರವಿದಾಸ್ ಮಂದಿರದಲ್ಲಿ ಮೋದಿ ಭಜನೆ, ಕೀರ್ತನೆ. ಮೋದಿ ಶಬ್ಧ ಕೀರ್ತನೆ ಹಿಂದಿದೆಯಾ ಪಂಚರಾಜ್ಯ ಮತ ಬೇಟೆ ರಹಸ್ಯ? ಪಂಜಾಬ್ ಕುರುಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ ಡೇರಾ ಪಾಲಿಟಿಕ್ಸ್. ಬಾಬಾ ರಾಮ್‌ ರಹೀಂ ಜೈಲಿನಿಂದ ಹೊರ ಬಂದಿದ್ದು ಅದೇ ಕಾರಣಕ್ಕಾ?

Share this Video
  • FB
  • Linkdin
  • Whatsapp

ನವದೆಹಲಿ(ಫೆ.17): ದೆಹಲಿಯ ರವಿದಾಸ್ ಮಂದಿರದಲ್ಲಿ ಮೋದಿ ಭಜನೆ, ಕೀರ್ತನೆ. ಮೋದಿ ಶಬ್ಧ ಕೀರ್ತನೆ ಹಿಂದಿದೆಯಾ ಪಂಚರಾಜ್ಯ ಮತ ಬೇಟೆ ರಹಸ್ಯ? ಪಂಜಾಬ್ ಕುರುಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ ಡೇರಾ ಪಾಲಿಟಿಕ್ಸ್. ಬಾಬಾ ರಾಮ್‌ ರಹೀಂ ಜೈಲಿನಿಂದ ಹೊರ ಬಂದಿದ್ದು ಅದೇ ಕಾರಣಕ್ಕಾ?

ಹೌದು 4 ವರ್ಷ ಜೈಲಿನಲ್ಲಿದ್ದ ಬಾಬಾ ರಾಮ್ ರಹೀಮ್ ಚುನಾವಣೆಗೆ ಒಂದು ವಾರ ಇರುವಾಗ ಪೆರೋಲ್ ಮೇಲೆ ಬಿಡುಗಡೆ ಆಗಿ ಬಂದಿದ್ದಾರೆ.ಸುಖಬೀರ್ ಸಿಂಗ್ ಬಾದಲ್ ಜಾಟ್ ಶಿಖರ ಬಾಬಾ ಗಳ ಆಶೆರ್ವಾದ ತೆಗೆದುಕೊಳ್ಳಲು ಓಡಾಡುತ್ತಿದ್ದಾರೆ.ಒಟ್ಟಿನಲ್ಲಿ ವೋಟು ಗಿಟ್ಟಿಸಲು ಈ ಬಾಬಾ ಗಳು ಬೇಕು.ಅದು ಹೇಗೆಂದರೆ ಚುನಾವಣೆಯಲ್ಲಿ ಬಾಬಾ ಗಳು ಭಕ್ತರಿಂದ ವೋಟು ಹಾಕಿಸುತ್ತಾರೆ.ಅಧಿಕಾರ ಹಿಡಿದ ರಾಜಕಾರಣಿ ಗಳು ಆನಂತರ ಬಾಬಾ ಗಳ ಸಾಮ್ರಾಜ್ಯಕ್ಕೆ ರಾಜಕೀಯ ಆಶ್ರಯ ನೀಡುತ್ತಾರೆ. ಹೀಗಿರುವಾಗ ಈ ಬಾರಿ ಪಂಜಾಬ್ ಚುನಾವಣೆಯಲ್ಲಿ ಡೇರಾ ರಾಜಕೀಯದ ಪ್ರಭಾವವೇನು? ಇಲ್ಲಿದೆ ವಿವರ

Related Video