
ಪೆಹಲ್ಗಾಮ್ ಸೇಡು, ಭಾರತದ ಸಂಭಾವ್ಯ ದಾಳಿಗೆ ಹೆದರಿ ಪಾಕಿಸ್ತಾನದಿಂದ ಮಿಲಿಟರಿ ತಾಲೀಮು ಶುರು
ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಲು ಭಾರತ ಸಜ್ಜಾಗಿದೆ. ಈ ಮಾತುಗಳು ಕೇಳಿಬರುತ್ತಿದ್ದಂತೆ ಪಾಕಿಸ್ತಾನ ಬೆಚ್ಚಿ ಬೆಚ್ಚಿದೆ. ಇದರ ಪರಿಣಾಮ ಪಾಕಿಸ್ತಾನ ಮಿಲಿಟರಿ ತಾಲೀಮು ಶುರುಮಾಡಿದೆ.
ನವದೆಹಲಿ(ಏ.24) ಪೆಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಭಾರತೀಯರು ಮೃತರಾಗಿದ್ದಾರೆ. ಹಿಂದೂಗಳ ಗುರಿಯಾಗಿಸಿ ನಡೆದ ಪೂರ್ವನಿಯೋಜಿತ ದಾಳಿಗೆ ಆಕ್ರೋಶ ಹೆಚ್ಚಾಗುತ್ತಿದೆ. ಪ್ರತೀಕಾರ ತೀರಿಸಲು ಭಾರತ ಸಜ್ಜಾಗುತ್ತಿದೆ. ಭಾರತದ ಸಂಭಾವ್ಯ ದಾಳಿಗೆ ಬೆದರಿದ ಪಾಕಿಸ್ತಾನ ಮಿಲಿಟರಿ ತಾಲೀಮು ಶುರು ಮಾಡಿದೆ