Omicron Variant: ರಾಜ್ಯದಲ್ಲಿ ಒಮಿಕ್ರೋನ್ ಕಟ್ಟೆಚ್ಚರ, ಹೊಸವರ್ಷ, ಕ್ರಿಸ್ಮಸ್ ಸಂಭ್ರಮಾಚರಣೆಗೆ ನಿರ್ಬಂಧ
ರಾಜ್ಯದಲ್ಲಿ ಒಮಿಕ್ರಾನ್ (Omicron) ಸೋಂಕಿತರ ಸಂಖ್ಯೆ 8 ಕ್ಕೇರಿದೆ. ಈಗಾಗಲೇ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಹೊಸವರ್ಷ (New Year 2022) ಕ್ರಿಸ್ಮಸ್ (Christmas) ಸಂಭ್ರಮಾಚರಣೆಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.
ನವದೆಹಲಿ (ಡಿ. 18): ಇಡೀ ಜಗತ್ತಿನಾದ್ಯಂತ ತಲ್ಲಣಕ್ಕೆ ಕಾರಣವಾಗಿರುವ ‘ಒಮಿಕ್ರೋನ್’(Omicron) ಕೋವಿಡ್ ರೂಪಾಂತರಿ ತಳಿ ಬ್ರಿಟನ್‌ನಲ್ಲಿ ವ್ಯಾಪಿಸುತ್ತಿರುವಂತೆ ಭಾರತದಲ್ಲಿ ಸಮುದಾಯಕ್ಕೆ ಹರಡಿದರೆ ನಿತ್ಯ 14 ಲಕ್ಷ ಪ್ರಕರಣಗಳು ದೃಢಪಡುವ ಸಾಧ್ಯತೆ ಇದೆ. ಅದೇ ರೀತಿ ಫ್ರಾನ್ಸ್ ಮಾದರಿಯಲ್ಲಿ ಹರಡಿದರೆ ದೇಶದಲ್ಲಿ ನಿತ್ಯ 13 ಲಕ್ಷ ಜನರಿಗೆ ಸೋಂಕು ತಗುಲುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನಗತ್ಯ ಓಡಾಟ ಮತ್ತು ಹೊಸ ವರ್ಷಾಚರಣೆ, ಸಭೆ-ಸಮಾರಂಭಗಳಲ್ಲಿ ಸೇರುವುದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಸರ್ಕಾರಜನರಿಗೆ ಮನವಿ ಮಾಡಿದೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಸೇರಿ ಕೋವಿಡ್ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಕೋರಿದೆ.
Chitradurga: ಹೊಸದುರ್ಗ ತಹಶೀಲ್ದಾರ್‌ಗೆ 'ಮತಾಂತರ' ಶಾಕ್, ದಿಢೀರ್ ಎತ್ತಂಗಡಿ!
ಇನ್ನು ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 8 ಕ್ಕೇರಿದೆ. ಈಗಾಗಲೇ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಹೊಸವರ್ಷ, ಕ್ರಿಸ್ಮಸ್ ಸಂಭ್ರಮಾಚರಣೆಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.