Omicron Variant: ರಾಜ್ಯದಲ್ಲಿ ಸೋಂಕು ಸ್ಫೋಟ, ಫೆಬ್ರವರಿಯಲ್ಲಿ 3 ನೇ ಖಚಿತ, ಎಚ್ಚರ ವಹಿಸಿ ಎಂದ ಮೋದಿ

ರಾಜ್ಯದಲ್ಲಿ ದಿನೇ ದಿನೇ ಒಮಿಕ್ರೋನ್ (Omicron Variant )  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿದೇಶಗಳಿಂದ ಕಳೆದ ವಾರ ರಾಜ್ಯಕ್ಕೆ ಆಗಮಿಸಿದ 9 ಪ್ರಯಾಣಿಕರು ಹಾಗೂ ಅವರ ಕುಟುಂಬದ ಮೂವರು ಸೇರಿ 12 ಮಂದಿಯಲ್ಲಿ ಒಮಿಕ್ರೋನ್‌ ಸೋಂಕು ಗುರುವಾರ ದೃಢಪಟ್ಟಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 24): ರಾಜ್ಯದಲ್ಲಿ ದಿನೇ ದಿನೇ ಒಮಿಕ್ರೋನ್ (Omicron Variant ) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿದೇಶಗಳಿಂದ ಕಳೆದ ವಾರ ರಾಜ್ಯಕ್ಕೆ ಆಗಮಿಸಿದ 9 ಪ್ರಯಾಣಿಕರು ಹಾಗೂ ಅವರ ಕುಟುಂಬದ ಮೂವರು ಸೇರಿ 12 ಮಂದಿಯಲ್ಲಿ ಒಮಿಕ್ರೋನ್‌ ಸೋಂಕು ಗುರುವಾರ ದೃಢಪಟ್ಟಿದೆ. 12 ಮಂದಿಯಲ್ಲಿ ಇಬ್ಬರು ಬಾಲಕಿಯರೂ ಇದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ರೂಪಾಂತರಿ ಸೋಂಕಿತರ ಒಟ್ಟು ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಶಾದ್ಯಂತ ಒಮಿಕ್ರೋನ್ ಹೆಚ್ಚುತ್ತಿದ್ದು, ವೈರಸ್ ನಿರ್ವಹಣೆಗೆ ರಾಜ್ಯಗಳಿಗೆ ಸಕಲ ನೆರವು ನೀಡಲು ಕೇಂದ್ರ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. 

Anti Conversion Bill: ವಿಧಾನಸಭೆಯಲ್ಲಿ ಅಂಗೀಕಾರ, ನಾವು ಗೆದ್ದರೆ ಮತಾಂತರ ಕಾಯ್ದೆ ರದ್ದು: ಸಿದ್ದು

ದೇಶದಾದ್ಯಂತ ಒಮಿಕ್ರೋನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಗುರುವಾರದಿಂದಲೇ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಅಮೆರಿಕಾ, ಯುರೋಪ್‌ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದಕ್ಕೆ ಡೆಲ್ಮಿಕ್ರೋನ್‌ ಕಾರಣ ಎಂದು ಹೇಳಲಾಗುತ್ತಿದೆ. ಕೋವಿಡ್‌ನ ರೂಪಾಂತರಿಗಳಾದ ಡೆಲ್ಟಾ ಮತ್ತು ಒಮಿಕ್ರೋನ್‌ಗಳನ್ನು ಸೇರಿಸಿ ಈ ಹೊಸ ಪದವನ್ನು ಸೃಷ್ಟಿಮಾಡಲಾಗಿದೆ. ಇನ್ನು ಫೆಬ್ರವರಿ ಅಂತ್ಯದೊಳಗೆ 3 ನೇ ಅಲೆ ಪಕ್ಕಾ ಎಂದು ಕಾನ್ಪುರ ಐಐಟಿ ತಜ್ಞರು ಎಚ್ಚರಿಸಿದ್ದಾರೆ. 

Related Video