ಮಣಿಪುರ ಹಿಂಸೆ ಬಗ್ಗೆ ಮೌನ ಮುರಿದ ಮೋದಿ, ಅವಿಶ್ವಾಸ ನಿರ್ಣಯ ಮಂಡಿಸಿ ಮುಗ್ಗರಿಸಿದ ವಿಪಕ್ಷ!

ವಿಪಕ್ಷದ ಜಾತಕ ಬಯಲು ಮಾಡಿದ ಮೋದಿ, ಸದನದಲ್ಲಿ ಮೂರು ರಹಸ್ಯ ಹೇಳಿ ವಿಪಕ್ಷವನ್ನು ತಿವಿದ ಪ್ರಧಾನಿ,ಭಾರತ ಮಣಿಪುರ ಜನತೆಯೊಂದಿಗಿದೆ, ಸಂಸತ್ತಿನಲ್ಲಿ ಮೋದಿ ಭರವಸೆ, ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Aug 10, 2023, 11:35 PM IST | Last Updated Aug 10, 2023, 11:35 PM IST

ಮಣಿಪುರ ವಿಚಾರ ಕುರಿತು ಮೌನವಾಗಿದ್ದಾರೆ ಎಂದು ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಇಂದು ವಿಪಕ್ಷಗಳ ಪ್ರಶ್ನೆಗೆ ಉತ್ತರ ನೀಡಿದ ಮೋದಿ, ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೋರ್ಟ್ ಆದೇಶದ ಬಳಿಕ ಆರಂಭಗೊಂಡ ಹಿಂಸಾಚಾರ ಮಣಿಪುರದಲ್ಲಿ ಗಂಭೀರವಾಯಿತು. ಮಹಿಳೆಯರ ಮೇಲೆ ಗಂಭೀರ ಅಪರಾಧಗಳೇ ನಡೆದುಹೋಗಿದೆ. ಮಣಿಪುರ ಮಹಿಳೆಯರು, ಮಕ್ಕಳೇ , ಮಣಿಪುರ ನಾಗರೀಕರೆ ನಿಮ್ಮೊಂದಿಗೆ ಭಾರತವಿದೆ. ಮಣಿಪುರದಲ್ಲಿ ಶಾಂತಿ ನೆಲೆಗೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ.ಅವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷಗಳು ಮತಕ್ಕೆ ಹಾಕುವ ಮೊದಲೇ ಸಭತ್ಯಾಗ ಮಾಡಿತ್ತು. ಇತ್ತ ಮೋದಿ ಸರ್ಕಾರ ನಿರೀಕ್ಷೆಯಂತೆ ಅವಿಶ್ವಾಸ ನಿರ್ಣಯ ಗೆದ್ದುಕೊಂಡಿತು. ಆದರೆ ವಿಪಕ್ಷಗಳ ನಡೆಗೆ ಟೀಕೆ ವ್ಯಕ್ತವಾಗಿದೆ.