ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ನ್ಯಾಯಾಲಯ ಅಸ್ತು; ಪ್ರಧಾನಿ ಮೋದಿಗೆ ಮಹಾಜಯ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ 13 ಸಾವಿರ ಕೋಟಿ ರು. ವಂಚಿಸಿ ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡಲು ಬ್ರಿಟನ್ ನ್ಯಾಯಾಲಯ ಅನುಮತಿ ನೀಡಿದೆ.
ನವದೆಹಲಿ (ಫೆ 26): ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ 13 ಸಾವಿರ ಕೋಟಿ ರು. ವಂಚಿಸಿ ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡಲು ಬ್ರಿಟನ್ ನ್ಯಾಯಾಲಯ ಅನುಮತಿ ನೀಡಿದೆ.
2 ನೆ ಅಲೆ ಅಲ್ಲ, ಸುನಾಮಿ...ಭೀತಿ ಹುಟ್ಟಿದ್ದೇಕೆ..?
ಭಾರತದಲ್ಲಿ ಆರ್ಥಿಕ ಅಪರಾಧ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಮೇಹುಲ್ ಚೋಕ್ಸಿ, ನೀರವ್ ಮೋದಿಯಂಥ ವ್ಯಕ್ತಿಗಳನ್ನು ಹಿಡಿದು ಮರಳಿ ಭಾರತಕ್ಕೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಘೋಷಿಸಿದ್ದರು. ಅದರಂತೆ ಬ್ರಿಟನ್ ನ್ಯಾಯಾಲಯದ ತೀರ್ಪಿನಿಂದ ‘ಚೌಕೀದಾರ್ ಮೋದಿ’ಗೆ ಜಯವಾಗಿದೆ.