Asianet Suvarna News Asianet Suvarna News

News Hour; ಎಲ್ಲ ಕಡೆ ಅಕಾಲಿಕ ಮಳೆ ಅಬ್ಬರ; ಕೃಷಿ ಮಸೂದೆ ಹಿಂದಕ್ಕೆ ಪಡೆಯಲು ಅಸಲಿ ಕಾರಣ

*  ಕರ್ನಾಟಕದಲ್ಲಿ ಮಳೆ ಅಬ್ಬರ, ಮೂವರು ಬಲಿ
* ತಿರುಪತಿಯಲ್ಲಿ ರಣಚಂಡಿ ಮಳೆ, ಭಯಾನಕ ದೃಶ್ಯ
* ಬೊಮ್ಮಾಯಿ ನಮ್ಮಕ್ಯಾಪ್ಟನ್  ಎಂದ ಪ್ರತಾಪ್ ಸಿಂಹ
*  ಬಿಜೆಪಿಯಿಂದ ರಾಜ್ಯಾದ್ಯಂತ  ಜನ ಸ್ವರಾಜ್ ಯಾತ್ರೆ 

Nov 19, 2021, 11:34 PM IST

ಬೆಂಗಳೂರು(ನ. 19)   ನವೆಂಬರ್ ತಿಂಗಳಿನಲ್ಲಿ ಕರ್ನಾಟಕ(Karnataka) ಅಕಾಲಿಕ ಮಳೆಗೆ (Rain)ತುತ್ತಾಗುತ್ತಿದೆ. ರಾಜಧಾನಿ ಬೆಂಗಳೂರಿನ (Bengaluru) ಜನರ ಪರಿಸ್ಥಿತಿ ಹೈರಾಣವಾಗಿದೆ. ಸಿಕ್ಕ ಸಿಕ್ಕ ವಾಹನಗಳೆಲ್ಲ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿವೆ. ಇದು ತಿರುಪತಿ ತಿರುಮಲದ (Tirupati) ದೃಶ್ಯ. ಕಂಡಕಂಡಲ್ಲಿ ಜಲಪಾತಗಳು ನಿರ್ಮಾಣ ಆಗಿವೆ. 

ಕೃಷಿ ಕಾಯಿದೆ ಹಿಂದಕ್ಕೆ ಮಡೆಯುವುದರ ಹಿಂದೆ ರಾಜಕೀಯ ಲೆಕ್ಕಾಚಾರ!

ಕರ್ನಾಟಕದಲ್ಲಿ ಮತ್ತೊಂದು ಸುತ್ತಿನ ಸಂಘಟನೆಯನ್ನು ಮುಂದೆ ಇಟ್ಟುಕೊಂಡಿರುವ ಬಿಜೆಪಿ ರಾಜ್ಯದಲ್ಲಿ ಜನ ಸ್ವರಾಜ್ ಯಾತ್ರೆ (Jan Swaraj Yatra)ನಡೆಸುತ್ತಿದೆ. ನಮ್ಮ ಕ್ಯಾಪ್ಟನ್ ಬಸವರಾಜ್ ಬೊಮ್ಮಾಯಿ (Basavaraj Bommai) ಎಂದು ಸಂಸದ ಪ್ರತಾಪ್ ಸಿಂಹ (Pratap Simha)ಹೇಳಿದ್ದಾರೆ. ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾಯಿದೆ ತಿದ್ದುಪಡಿ ಹಿಂದಕ್ಕೆ ಪಡೆದಿರುವುದನ್ನು ರಾಜ್ಯದ ರೈತ (Farmer) ಮುಖಂಡರು ಸ್ವಾಗತ ಮಾಡಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.