News Hour; ಒಮ್ರಿಕಾನ್ ತಡೆಗೆ ರಾಜ್ಯದ ನಿಯಮ, ಕಟ್ಟೆಚ್ಚರ
* ಲಾಕ್ ಡೌನ್ ವದಂತಿ ಹಬ್ಬಿಸಿದರೆ ಎಚ್ಚರ!
* ಹೊಸ ವೈರಸ್ ತಡೆಗೆ ಮಹತ್ವದ ಸಭೆ
* ಲಸಿಕೆ ತೆಗೆದುಕೊಳ್ಳಲು ಯಾಕೆ ಹಿಂದೇಟು?
* ಲಸಿಕೆ ಹಾಕಿಸಿಕೊಳ್ಳದ ಅಜ್ಜಿಯ ದೇವರ ಕತೆ!
ಬೆಂಗಳೂರು(ನ. 30) ಒಮ್ರಿಕಾನ್ (Omicron) ವೈರಸ್ ಬಗ್ಗೆ ಸರ್ಕಾರ ಕಟ್ಟೆಚ್ಚರ ತೆಗೆದುಕೊಂಡಿದ್ದು ಲಾಕ್ ಡೌನ್(Lockdown) ಪ್ರಸ್ತಾಪ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ. ಹಾಸನ (Hassan) ಜಿಲ್ಲೆಯಲ್ಲಿ ಕೊರೋನಾದಿಂದ (Coronavirus) ಇತ್ತೀಚೆಗೆ ಸಾವು ಕಂಡವರಲ್ಲಿ ಬಹುಪಾಲು ಜನ ಲಸಿಕೆ (Vaccine) ತೆಗೆದುಕೊಂಡಿರಲಿಲ್ಲ. ದಯವಿಟ್ಟು ಲಸಿಕೆ ತೆಗೆದುಕೊಳ್ಳಿ ಎಂಬ ಮನವಿಯನ್ನು ಆರೋಗ್ಯಾಧಿಕಾರಿ ಮತ್ತೆ ಮಾಡಿದ್ದಾರೆ. ದಾವಣಗೆರೆಯಲ್ಲಿನ (Davanagere) ಅಜ್ಜಿಯೊಬ್ಬಳು ಲಸಿಕೆ ತೆಗೆದುಕೊಳ್ಳಲಿಲ್ಲ. ತಹಶೀಲ್ದಾರ್ ಮನವೊಲಿಸಲು ಹೋದಾಗ ನಡೆದ ಘಟನೆ ಇಲ್ಲಿದೆ. ನಾನೇ ದೇವರು ನನಗೇನು ಲಸಿಕೆ ಹಾಕುತ್ತಿಯಾ? ಎಂದಿದ್ದು ವೈರಲ್ ಆಗಿದೆ.
ಚುನಾವಣೆಗೂ ಮುನ್ನವೇ ಜೆಡಿಎಸ್‌ಗೆ ಬಿಗ್ ಶಾಕ್
ಕೇಂದ್ರ ಸರ್ಕಾರ (Union Govt) ಕೃಷಿ ಕಾಯಿದೆ ಮಸೂದೆ (Farms Bill) ಹಿಂದಕ್ಕೆ ಪಡೆದಿದೆ. ಆದರೆ ಇದರಿಂದ ಆಗುವ ಮಹತ್ವದ ಬದಲಾವಣೆ ಏನು? ಇರುವ ಸ್ಥಿತಿಯೇ ಮುಂದುವರಿಯಲಿದೆ? ಸಮಗ್ರ ವಿಶ್ಲೇಷಣೆ ಇಲ್ಲಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..