News Hour : ಕರ್ನಾಟಕದಲ್ಲಿ ವೀಕೆಂಡ್ ಲಾಕ್, ಪಾದಯಾತ್ರೆಗೆ ಸರ್ಕಾರದ ಶಾಕ್!
* ಮೇಕೆದಾಟು ಅಖಾಡದಲ್ಲಿ ಏನಾಗುತ್ತಿದೆ?
* ಪಾದಯಾತ್ರೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದ ಕಾಂಗ್ರೆಸ್
* ವೀಕೆಂಡ್ ಕರ್ಫ್ಯೂ.. ಏನಿರುತ್ತದೆ? ಏನಿಲ್ಲ?
* ವೀಕೆಂಡ್ ಕರ್ಫ್ಯೂ.. ಜಿಲ್ಲಾ ಕೇಂದ್ರಗಳ ಸ್ಥಿತಿ ಏನು?
ಬೆಂಗಳೂರು(ಜ. 07) ಕೊರೋನಾ (Coronavirus)ನಿಯಮದ ಕಾರಣಕ್ಕೆ ಮೇಕೆದಾಟು (Mekedatu Padayatra) ಪಾದಯಾತ್ರೆಗೆ ಅನುಮತಿ ನೀಡಲಾಗಿಲ್ಲ. ಆದರೆ ಕಾಂಗ್ರೆಸ್ (Congress) ನಾಯಕರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದ್ದರೆ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಜೆಡಿಎಸ್ (JDS) ಜನತಾ ಜಲಧಾರೆ ಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಹೊಸ ವರ್ಷದ ನಂತರ ಕರ್ನಾಟಕದಲ್ಲಿ ಕೊರೋನಾ ಸ್ಫೋಟ
ದಿನಸಿ, ಮೆಡಿಕಲ್ ಸೇರಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು ವೀಕೆಂಡ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೊರೋನಾ ನಿಯಮಗಳನ್ನು ತಿಳಿದುಕೊಳ್ಳಲೇಬೇಕು. ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದ್ದು ಜಿಲ್ಲಾ ಕೇಂದ್ರಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದೆ. ಅಗತ್ಯ ವಸ್ತು ಹೊರತು ಪಡಿಸಿ ಉಳಿದ ಎಲ್ಲ ವಹಿವಾಟು ಬಂದ್ ಆಗಿದೆ.