News Hour : ಕರ್ನಾಟಕದಲ್ಲಿ ಒಮಿಕ್ರೋನ್ ಸ್ಫೋಟ, ರಮೇಶ್ ಬಾಯಿಂದ ಎಂಥಾ ಮಾತು!
* ಕರ್ನಾಟಕದಲ್ಲಿ ಒಂದೆ ದಿನ 5 ಓಮಿಕ್ರೋನ್
* ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
* ಮತ್ತೆ ತಾರಕಕ್ಕೆ ಏರಿದ ಕಮಿಷನ್ ಸರ್ಕಾರ ಆರೋಪ
* ನಮ್ಮನ್ನು ಸೇರಿಸಿ ತನಿಖೆ ಮಾಡಿ, ಸಿದ್ದು ಸವಾಲು
ಬೆಂಗಳೂರು(ಡಿ. 17) ದೇಶದ ಮೊದಲ ಕೊರೋನಾ (Coronavirus) ರೂಪಾಂತರಿ ಓಮಿಕ್ರೋನ್ (Omicron variant) ಕರ್ನಾಟಕದಲ್ಲಿ (Karnataka) ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಇದೀಗ ಒಂದೇ ದಿನ ಐದು ಪ್ರಕರಣ ಕಂಡುಬಂದಿದೆ. ಬೆಳಗಾವಿ ಸದನದಲ್ಲಿ(Belagavi Assembly Session) ಕಾಂಗ್ರೆಸ್ (Congress) ನಾಯಕ ರಮೇಶ್ ಕುಮಾರ್ (Ramesh Kumar) ಹೇಳಿದ ಮಾತುಗಳು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅತ್ಯಾಚಾರ ತಡೆಯಲು ಸಾಧ್ಯವಾಗದಿದ್ದರೆ ಅದನ್ನು ಎಂಜಾಯ್ ಮಾಡಬೇಕಷ್ಟೆ! ಎಂದು ಹೇಳಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.
Belagavi Assembly Session : 'ರೇಪ್ ತಪ್ಪಿಸಿಕೊಳ್ಳಲು ಅಸಾಧ್ಯ ಎಂದಾಗ ಎಂಜಾಯ್ ಮಾಡ್ಬೇಕು'!
ರಾಜ್ಯ ಸರ್ಕಾರ ಪರ್ಸಂಟೇಜ್, ಕಮಿಷನ್ ನಲ್ಲಿ ಮುಳುಗಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇರುವಾಗ ನಾಯಕರ ನಡುವೆ ವಾಕ್ ಸಮರ ಮಿತಿಮೀರಿದೆ. ಡಿಕೆ ಶಿವಕುಮಾರ್ (DK Shivakumar)ಮತ್ತು ಸಿಟಿ ರವಿ (CT Ravi)ನಡುವೆ ಲೂಟಿ ರವಿ..ಡಿಕೆಯಲ್ಲ ಕೆಡಿ ಫೈಟ್ ಸಹ ನಡೆದಿದೆ.