News Hour; ಉಪಚುನಾವಣೆ ಫಲಿತಾಂಶದ ಹಿಂದಿನ ಲೆಕ್ಕಚಾರಗಳು!
* ಅಗಲಿದ ಪುನೀತ್‌ಗೆ ಹಾಲು ತುಪ್ಪ ಕಾರ್ಯಕ್ರಮ
* ಉಪಸಮರದ ಫಲಿತಾಂಶ ಬಂತು.. ಒಂದು ಕೈ..ಒಂದು ಕಮಲ!
* 2018 ಮತ್ತು 2021... ವೋಟಿಂಗ್ ಸರಾಸರಿ ಲೆಕ್ಕಾಚಾರ
* ಜೆಡಿಎಸ್ ನಾಯಕರು ಸೋಲಿನ ನಂತ್ರ ಏನಂದ್ರು?
ಬೆಂಗಳೂರು(ನ. 02) ಅಪ್ಪು (Puneeth Rajkumar) ನೆಚ್ಚಿನ ಐವತ್ತು ಬಗೆಯ ಖಾದ್ಯಗಳನ್ನು ಇಟ್ಟು ಕುಟುಂಬ ಪೂಜೆ ನೆರವೇರಿಸಿದೆ. ಅಪ್ಪುಗೆ ಪ್ರಿಯವಾದ ಮುದ್ದೆ-ನಾಟಿಕೋಳಿ ಸಾರನ್ನು ಇಟ್ಟು ಕುಟುಂಬದವರು ಹಾಲು ತುಪ್ಪ ಸಮರ್ಪಿಸಿದ್ದಾರೆ.
ಬಿಜೆಪಿ ಕಾಂಗ್ರೆಸ್ ಗೆ ಸಮಪಾಲು... ಮುಂದೆ ಯಾವ ಬದಲಾವಣೆ!
ಹಾನಗಲ್(Hangal) ಮತ್ತು ಸಿಂಧಗಿ (Sindhagi) ಉಪಸಮರದ ಫಲಿತಾಂಶ ಹೊರಬಂದಿದ್ದು ಹಾನಗಲ್ ಕಾಂಗ್ರೆಸ್(Congress) ಪಾಲಾಗಿದ್ದರೆ ಸಿಂಧಗಿಯಲ್ಲಿ ಬಿಜೆಪಿ (BJP) ಗೆದ್ದಿದೆ. ಜೆಡಿಎಸ್ (JDS) ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಹಿಂದಿನ ವಿಧಾನಸಭೆ ಚುನಾವಣೆಗೂ ಈಗ ಬಂದಿರುವ ಫಲಿತಾಂಶಕ್ಕೂ ಹೋಲಿಕೆ ಮಾಡಬೇಕಿದ್ದು ಲೆಕ್ಕಾಚಾರ ಇಲ್ಲಿದೆ. ಜೆಡಿಎಸ್ ನಾಯಕರು ಅಬ್ಬರದ ಪ್ರಚಾರವನ್ನೇ ನಡೆಸಿದ್ದರು ಆದರೆ ಎರು ಕ್ಷೇತ್ರದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ. ಹಣ ಬಲ ಮತ್ತು ಅಧಿಕಾರದಿಂದ ಬಿಜೆಪಿ ಗೆಲವು ಸಾಧಿಸಿದೆ ಎನ್ನುವುದು ಜೆಡಿಎಸ್ ಪ್ರಮುಖರ ಮಾತು.. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ