Asianet Suvarna News Asianet Suvarna News

News Hour ಅಗ್ನಿಪಥಕ್ಕೆ ಕರ್ನಾಟಕವೂ ಅಗ್ನಿಕುಂಡ!

ಉತ್ತರ ಭಾರತ ಹಾಗೂ ತೆಲಂಗಾಣದಲ್ಲಿ ಶುರುವಾದ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆ ಇದೀಗ ಕರ್ನಾಟಕಕ್ಕೂ ಹಬ್ಬಿದೆ. ಧಾರವಾಡ ಹಾಗೂ ಬೆಳಗಾವಿಯಲ್ಲಿ ಭಾರಿ ಪ್ರತಿಭಟನೆ ನಡೆದಿದೆ.
 

ಬೆಂಗಳೂರು (ಜೂನ್ 18): ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದ ಅಗ್ನಿಪಥ ಯೋಜನೆಗೆ (Agnipath Scheme) ದೇಶವ್ಯಾಪಿ ಪ್ರತಿಭಟನೆಗಳು ವ್ಯಕ್ತವಾಗಿದ್ದು, ಸತತ ನಾಲ್ಕನೇ ದಿನ ಇದು ಮುಂದುವರಿದಿದೆ. ಶನಿವಾರ ಈ ಪ್ರತಿಭಟನೆಗಳು (Protest) ಕರ್ನಾಟಕಕ್ಕೂ ವ್ಯಾಪಿಸಿದವು. ಧಾರವಾಡ (Dharawad) ಹಾಗೂ ಬೆಳಗಾವಿಯಲ್ಲಿ (Belagavi) ಈ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.

ಅಗ್ನಿಪಥ ಯೋಜನೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದೆ. ಅಗ್ನಿಪಥ ಯೋಜನೆ ಕುರಿತು ತಪ್ಪು ಮಾಹಿತಿ ಹರಡಿ ಕಾಂಗ್ರೆಸ್ ಯುವಕರನ್ನು ಪ್ರಚೋದಿಸುತ್ತಿದೆ ಎಂದು ಬಿಜೆಪಿ (BJP Leader) ನಾಯಕರು ಆರೋಪಿಸಿದ್ದಾರೆ. ಇದರ ನಡುವೆ ಕೇಂದ್ರ ರಕ್ಷಣಾ ಇಲಾಖೆ ಹಾಗೂ ಕೇಂದ್ರ ಗೃಹ ಇಲಾಖೆ ತನ್ನ ಅಡಿಯಲ್ಲಿ ಬರುವ ನೇಮಕಾತಿಯಲ್ಲಿ ತಲಾ ಶೇ.10ರಷ್ಟು ಮೀಸಲಾತಿಯನ್ನು ಅಗ್ನಿವೀರರಿಗೆ ಘೋಷಣೆ ಮಾಡಿದೆ.

ಅಗ್ನಿಪಥ ದಿಕ್ಕಿಲ್ಲದ ಯೋಜನೆ, ಪ್ರತಿಭಟನಕಾರರಿಗೆ ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ!

ಇನ್ನು ದೇಶದ ಮಟ್ಟಿಗೆ ನೋಡುವುದಾದರೆ, ಬಿಹಾರ, ಹರಿಯಾಣ ಹಾಗೂ ರಾಜಸ್ಥಾನಗಳಲ್ಲಿ ಪ್ರತಿಭಟನೆಗಳು ಮುಂದುವರಿದಿದೆ. ಕೇಂದ್ರ ನಿರಂತರ ಸ್ಪಷ್ಟನೆಗಳನ್ನು ನೀಡಿದ್ದರೂ, ಪ್ರತಿಭಟನಾಕಾರರ ರೋಷಾಗ್ನಿ ತಣಿಯುತ್ತಿಲ್ಲ.

Video Top Stories