News Hour 8ನೇ ದಿನಕ್ಕೆ ಕಾಲಿಟ್ಟ ಯುದ್ಧ, ಸೈಬಿರಿಯಾಕ್ಕೆ ಪುಟಿನ್ ಕುಟುಂಬ

ಎಂಟನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಯುದ್ಧ

ಸೈಬಿರಿಯಾಕ್ಕೆ ತೆರಳಿದ ವ್ಲಾಡಿಮಿರ್ ಪುಟಿನ್ ಕುಟುಂಬ

ಆಪರೇಷನ್ ಗಂಗಾ ಕಾರ್ಯಾಚರಣೆಗೆ ಇನ್ನಷ್ಟು ವೇಗ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.3): ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ ಸತತ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ನಿಂದ ಕ್ಷಿಪಣಿ (Missile) ದಾಳಿ ಆಗಬಹುದು ಎನ್ನುವ ಎಚ್ಚರಿಕೆಯಲ್ಲಿ ಗಡಿಯಲ್ಲಿ ಎಸ್-400 (S-400) ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ರಷ್ಯಾ ಅಳವಡಿಸಿದ್ದರೆ, ಉಕ್ರೇನ್ ಕೂಡ ತನ್ನ ನೆಲವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ತೋರಿದೆ. ರಷ್ಯಾ ಸೇನೆ ಆಕ್ರಮಣ ಮಾಡಿದ ಬಳಿಕ ಈವರೆಗೂ 10 ಲಕ್ಷ ಜನ ಉಕ್ರೇನ್ ದೇಶವನ್ನು ತೊರೆದಿದ್ದಾರೆ. ಆಶ್ರಯ ಬೇಡಿಕೊಂಡು ಉಕ್ರೇನ್ ಜನತೆ ಅಕ್ಕಪಕ್ಕದ ದೇಶಗಳಿವೆ ವಲಸೆ ಹೋಗಿದ್ದಾರೆ.

ಇನ್ನು ಅಣ್ವಸ್ತ್ರ (nuclear bomb) ದಾಳಿ ಭೀತಿ ಹಿನ್ನಲೆಯಲ್ಲಿ ವ್ಲಾಡಿಮಿರ್ ಪುಟಿನ್ (Vladimir Putin) ತಮ್ಮ ಕುಟುಂಬವನ್ನು ಸೈಬೀರಿಯಾದಲ್ಲಿರುವ (siberia) ಭೂಗತ ನಗರಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂದು ವರದಿಯಾಗಿದೆ. ಅದರೊಂದಿಗೆ ಉಕ್ರೇನ್ ಸೇನೆಯು ಕ್ಷಿಪಣಿ ದಾಳಿ ನಡೆಸಬಹುದು ಎನ್ನುವ ಭೀತಿ ಇರುವ ಕಾರಣ ರಷ್ಯಾ ಹಾಗು ಉಕ್ರೇನ್ ಗಡಿಯಲ್ಲಿ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನೂ ಅಳವಡಿಸಿದ್ದಾರೆ.

ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳನ್ನ ಸ್ವಾಗತಿಸಿದ ಸಚಿವ RC
ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ, ಆಪರೇಷನ್ ಗಂಗಾ (Operation Ganga) ಕಾರ್ಯಾಚರಣೆ ಇನ್ನಷ್ಟು ವೇಗ ಪಡೆದುಕೊಂಡಿದ್ದೂ, ಇಂದೂ ಕೂಡ ಸಾಕಷ್ಟು ಜನರನ್ನು ದೇಶಕ್ಕೆ ಕರೆತರಲಾಗಿದೆ. ಕಾರ್ಯಾಚರಣೆಯ ಬಗ್ಗೆ ಪರ-ವಿರೋಧದ ಚರ್ಚೆ ನಡುವೆಯೇ ಸರ್ಕಾರ ಮಾತ್ರ 18 ಸಾವಿರ ಭಾರತೀಯರ ರಕ್ಷಣೆಗೆ ಬದ್ಧವಾಗಿರುವುದಾಗಿ ಹೇಳಿದೆ.

Related Video