ಶ್ರೀರಾಮ ಮಂದಿರ ನಿರ್ಮಾಣದ Exclusive ವರದಿ, ಆಯೋಧ್ಯೆಯಲ್ಲಿ ಸುವರ್ಣನ್ಯೂಸ್!

ಈ ಬಾರಿಯ ದೀಪಾವಳಿ ಆಯೋಧ್ಯೆಗೆ ಹಲವು ಕಾರಣಗಳಿಂದ ವಿಶೇಷವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆಯಲ್ಲಿ ಹಾಜರಿದ್ದರು. ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದ್ದಾರೆ. ಇದೀಗ ಏಷ್ಯಾನೆಟ್ ಸುವರ್ಣನ್ಯೂಸ್ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದ ಇಂಚಿಂಚು ಮಾಹಿತಿ ನೀಡುತ್ತಿದೆ. ಆಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಸ್ಥಳಕ್ಕೆ ತೆರಳಿ ನೀಡಿರುವ ವಸ್ತುನಿಷ್ಠ ವರದಿ ಇಲ್ಲಿದೆ.

First Published Oct 25, 2022, 11:40 PM IST | Last Updated Sep 7, 2023, 5:03 PM IST

ಆಯೋಧ್ಯೆಯಲ್ಲಿ ಭವ್ಯವಾದ ಪ್ರಭು ಶ್ರೀರಾಮಚಂದ್ರನ ಮಂದಿರ ನಿರ್ಮಾಣವಾಗುತ್ತಿದೆ. 6 ತಿಂಗಳ ಹಿಂದೆ ಸುವರ್ಣನ್ಯೂಸ್ ರಾಮ ಮಂದಿರ ನಿರ್ಮಾಣ ಕಾರ್ಯದ ಸಂಪೂರ್ಣ ಮಾಹಿತಿ ನೀಡಿತ್ತು. ಇದೀಗ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕಾದ ದಿನಾಂಕ ಹತ್ತಿರ ಬರುತ್ತಿದೆ. ಹೀಗಾಗಿ ನಿರ್ಮಾಣ ಕಾರ್ಯ ಮಿಂಚಿನ ವೇಗ ಪಡೆದಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಎಕ್ಸ್‌ಕ್ಯೂಟೀವ್ ಚೇರ್ಮೆನ್ ರಾಜೇಶ್ ಕಾಲ್ರಾ ಇದೀಗ ಮತ್ತೆ ರಾಮ ಮಂದಿರ ನಿರ್ಮಾಣ ಕಾರ್ಯದ ಮಾಹಿತಿ ನೀಡಿದ್ದಾರೆ 2023ರ ಡಿಸೆಂಬರ್ ಒಳಗೆ ಮಂದಿ ನಿರ್ಮಾಣ ಕಾರ್ಯ ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಶ್ರೀರಾಮ ಪ್ರತಿಷ್ಠಾಪನೆಗೂ ದಿನಾಂಕ ನಿಗದಿಯಾಗಿದೆ. ಹೀಗಾಗಿ ಶರವೇಗದಲ್ಲಿ ಕೆಲಸಗಳು ನಡೆಯುತ್ತಿದೆ. ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ಹಾಗೂ ಭಾರತದ ಅಸ್ಮಿತೆಯ ರಾಮ ಮಂದಿರ ನಿರ್ಮಾಣ ಕಾರ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.