5 State Election: ಹಣಕ್ಕಾಗಿ ತಾಯಿಯನ್ನೇ ತೊರೆದ'ಕ್ರೂರಿ ಸಿಧು';ಪಂಜಾಬ್ ಪಾಲಿಟಿಕ್ಸ್‌ನಲ್ಲಿ ಸಂಚಲನ

ಪಂಚರಾಜ್ಯ ಚುನಾವಣೆ ಘೋಷಣೆಯಾಗಿದ್ದು, ಎಲೆಕ್ಷನ್ ಭರಾಟೆ ಬಲು ಜೋರಾಗಿದೆ. ಏತನ್ಮಧ್ಯೆ  ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ‘ಕ್ರೂರ ವ್ಯಕ್ತಿ’ ಆತ ಹಣಕ್ಕಾಗಿ ವೃದ್ಧಾಪ್ಯದಲ್ಲಿ ಹೆತ್ತ ತಾಯಿಯನ್ನೇ ತೊರೆದಿದ್ದಾನೆ ಎಂದು ಎಂದು ಸಿಧು ಹಿರಿಯ ಸಹೋದರಿ ಸುಮನ್‌ ತುರ್‌ ಆರೋಪಿಸಿದ್ದಾರೆ.  

Share this Video
  • FB
  • Linkdin
  • Whatsapp

ಪಂಚರಾಜ್ಯ ಚುನಾವಣೆ ಘೋಷಣೆಯಾಗಿದ್ದು, ಎಲೆಕ್ಷನ್ ಭರಾಟೆ ಬಲು ಜೋರಾಗಿದೆ. ಏತನ್ಮಧ್ಯೆ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ‘ಕ್ರೂರ ವ್ಯಕ್ತಿ’ ಆತ ಹಣಕ್ಕಾಗಿ ವೃದ್ಧಾಪ್ಯದಲ್ಲಿ ಹೆತ್ತ ತಾಯಿಯನ್ನೇ ತೊರೆದಿದ್ದಾನೆ ಎಂದು ಎಂದು ಸಿಧು ಹಿರಿಯ ಸಹೋದರಿ ಸುಮನ್‌ ತುರ್‌ ಆರೋಪಿಸಿದ್ದಾರೆ. ಈ ಆರೋಪ ಪಂಜಾಬ್ ಪಾಲಿಟಿಕ್ಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. 

‘1986ರಲ್ಲಿ ಸಿಧು ತಂದೆಯ ನಿಧನದ ನಂತರ ಆಸ್ತಿಗಾಗಿ ಅವರ ತಾಯಿ ಹಾಗೂ ಸಹೋದರಿಯನ್ನು ಮನೆಯಿಂದ ಹೊರಹಾಕಿದರು. ನನ್ನ ತಂದೆಯ ಮನೆ, ಜಮೀನು, ಪಿಂಚಣಿಯ ಸಿಧು ಹಣವನ್ನೆಲ್ಲ ಕಬಳಿಸಿದರು. 1989ರಲ್ಲಿ ರೇಲ್ವೆ ನಿಲ್ದಾಣದಲ್ಲಿ ತಾಯಿ ಅಸುನೀಗಿದರು. ಆಸ್ತಿಗಾಗಿ ಮನೆಯಿಂದ ತಾವೇ ಹೊರಹಾಕಿದ ಸಿಧು ತನ್ನ ತಾಯಿಯು ತಂದೆಯಿಂದ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದರು ಎಂದು ಸಂದರ್ಶನದಲ್ಲಿ ಸುಳ್ಳು ಹೇಳಿದ್ದಾರೆ' ಎಂದು ಸುಮನ್ ತುರ್ ಆರೋಪಿಸಿದ್ದಾರೆ. 

Related Video