ಅಮೆರಿಕಕ್ಕೆ ನ್ಯೂಯಾರ್ಕ್, ಚೀನಾಗೆ ವುಹಾನ್, ಭಾರತಕ್ಕೆ ಮುಂಬೈ ಮಾರಿ..!
ಕೊರೋನಾ ಮಹಾಮಾರಿ ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ನಮ್ಮ ದೇಶದ ವಾಣಿಜ್ಯ ನಗರಿ ಮುಂಬೈ ಕೊರೊನಾ ಕಾರ್ಖಾನೆಯಾಗುತ್ತದೆ. ರಾಜ್ಯಕ್ಕೂ ಇದು ಕಂಟಕವಾಗುತ್ತಿದೆ. ಮಂಗಳವಾರ ದೇಶಾದ್ಯಂತ 7721 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 265498 ಕ್ಕೆ ಏರಿಕೆಯಾಗಿದೆ. ಜೊತೆಗೆ 245 ಸೋಂಕಿತರು ಸಾವನ್ನಪ್ಪಿದ್ದು ಒಟ್ಟು ಸಾವಿನ ಪ್ರಮಾಣ 7710 ಕ್ಕೆ ಏರಿಕೆಯಾಗಿದೆ.
ಬೆಂಗಳೂರು (ಜೂ. 10): ಕೊರೋನಾ ಮಹಾಮಾರಿ ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ನಮ್ಮ ದೇಶದ ವಾಣಿಜ್ಯ ನಗರಿ ಮುಂಬೈ ಕೊರೊನಾ ಕಾರ್ಖಾನೆಯಾಗುತ್ತದೆ. ರಾಜ್ಯಕ್ಕೂ ಇದು ಕಂಟಕವಾಗುತ್ತಿದೆ. ಮಂಗಳವಾರ ದೇಶಾದ್ಯಂತ 7721 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 265498 ಕ್ಕೆ ಏರಿಕೆಯಾಗಿದೆ. ಜೊತೆಗೆ 245 ಸೋಂಕಿತರು ಸಾವನ್ನಪ್ಪಿದ್ದು ಒಟ್ಟು ಸಾವಿನ ಪ್ರಮಾಣ 7710 ಕ್ಕೆ ಏರಿಕೆಯಾಗಿದೆ.
ದೆಹಲಿ ಸಿಎಂಗೆ ಬಿಗ್ ರಿಲೀಫ್; ಕೇಜ್ರಿಗೆ ಕೊರೊನಾ ಟೆಸ್ಟ್ ನೆಗೆಟಿವ್
ಇವೆಲ್ಲದರ ನಡುವೆ ಈ ವರೆಗೆ ವೈರಸ್‌ಗೆ ತುತ್ತಾಗಿದ್ದ 133267 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮಂಗಳವಾರ ಮಹಾರಾಷ್ಟ್ರದಲ್ಲಿ 2251 ಕೇಸು ಪತ್ತೆಯಾಗಿದ್ದು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90787 ಕ್ಕೆ ತಲುಪಿದೆ. ಉಳಿದಂತೆ ತಮಿಳುನಾಡಿನಲ್ಲಿ 1685, ದೆಹಲಿಯಲ್ಲಿ 1007 ಹೊಸ ಪ್ರಕರಣಗಳು ದಾಖಲಾಗಿವೆ.