Asianet Suvarna News Asianet Suvarna News

ಜನರ ಬೆಂಬಲದಿಂದ ಎಲ್ಲವೂ ಸಾಧ್ಯ: ಲಸಿಕೆ ವಿಚಾರದಲ್ಲಿ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದ ಭಾರತ!

ದೇಶದಲ್ಲಿ ನೂರು ಕೋಟಿ ಕೊರೋನಾ ಲಸಿಕಾಕರಣದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಾರತೀಯರ ಒಗ್ಗಟ್ಟಿಗೆ ಭೇಷ್ ಎಂದಿದ್ದಾರೆ. ಹೌದು ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಕೊರೋನಾ ಸೋಂಕು ಆವರಿಸಿದ್ದ ಆರಂಭದಲ್ಲಿ ಭಾರತದಂತಹ ರಾಷ್ಟ್ರದಲ್ಲಿ ಈ ಸೋಂಕಿನ ವಿರುದ್ಧ ಹೋರಾಡುವುದು ಬಹಳ ಕಷ್ಟವಾಗಬಹುದೆಂಬ ಅಂದಾಜು ಮಾಡಲಾಗಿತ್ತು. ಭಾರತಕ್ಕೆ ಹಾಗೂ ಇಲ್ಲಿನ ಜನರಿಗೆ ಇಷ್ಟು ಸಂಯಮ, ಇಷ್ಟು ಶಿಸ್ತು ಇಲ್ಲಿ ಹೇಗೆ ಅಳವಡಿಸಲು ಸಾಧ್ಯ ಎಂಬ ಪ್ರಶ್ನೆಗಳನ್ನೂ ಕೇಳಲಾಗಿತ್ತು. ಆದರೆ ನಮ್ಮ ಪಾಲಿಗೆ ಪ್ರಜಾಪ್ರಭುತ್ವ ಎಂದರೆ 'ಸಬ್‌ ಕಾ ಸಾಥ್' ಎಂದಿದ್ದಾರೆ

First Published Oct 22, 2021, 2:59 PM IST | Last Updated Oct 22, 2021, 2:59 PM IST

ನವದೆಹಲಿ(ಅ.22): ದೇಶದಲ್ಲಿ ನೂರು ಕೋಟಿ ಕೊರೋನಾ ಲಸಿಕಾಕರಣದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಾರತೀಯರ ಒಗ್ಗಟ್ಟಿಗೆ ಭೇಷ್ ಎಂದಿದ್ದಾರೆ. ಹೌದು ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಕೊರೋನಾ ಸೋಂಕು ಆವರಿಸಿದ್ದ ಆರಂಭದಲ್ಲಿ ಭಾರತದಂತಹ ರಾಷ್ಟ್ರದಲ್ಲಿ ಈ ಸೋಂಕಿನ ವಿರುದ್ಧ ಹೋರಾಡುವುದು ಬಹಳ ಕಷ್ಟವಾಗಬಹುದೆಂಬ ಅಂದಾಜು ಮಾಡಲಾಗಿತ್ತು. ಭಾರತಕ್ಕೆ ಹಾಗೂ ಇಲ್ಲಿನ ಜನರಿಗೆ ಇಷ್ಟು ಸಂಯಮ, ಇಷ್ಟು ಶಿಸ್ತು ಇಲ್ಲಿ ಹೇಗೆ ಅಳವಡಿಸಲು ಸಾಧ್ಯ ಎಂಬ ಪ್ರಶ್ನೆಗಳನ್ನೂ ಕೇಳಲಾಗಿತ್ತು. ಆದರೆ ನಮ್ಮ ಪಾಲಿಗೆ ಪ್ರಜಾಪ್ರಭುತ್ವ ಎಂದರೆ 'ಸಬ್‌ ಕಾ ಸಾಥ್' ಎಂದಿದ್ದಾರೆ

ಹೀಗಾಗಿ ಎಲ್ಲರನ್ನೂ ಒಟ್ಟಿಗೆ ಸೇರಿಸಿ ದೇಶ ಎಲ್ಲರಿಗೂ ಲಸಿಕೆ, ಉಚಿತ ಲಸಿಕಾ ಅಭಿಯಾನ ಆರಂಭಿಸಿತು. ಬಡವರು, ಶ್ರೀಮಂತರು, ನಗರ, ಹಳ್ಳಿ ಹೀಗೆ ಎಲ್ಲರಿಗೂ ಲಸಿಕೆ ನಿಡಲಾಯಿತು. ರೋಗ ಯಾವುದೇ ಬೇದ ಭಾವ ಮಾಡುವುದಿಲ್ಲ ಎಂದ ಮೇಲೆ ಲಸಿಕೆಯಲ್ಲೂ ಈ ಯಾವುದೇ ಬೇದ ಭಾವ ಇರಬಾರದು ಎಂಬುವುದಷ್ಟೇ ನಮ್ಮ ಧ್ಯೇಯವಾಗಿತ್ತು. ಹೀಗಾಗಿ ಲಸಿಕೆ ಅಭಿಯಾನದಲ್ಲಿ ವಿಐಪಿ ಸಂಸ್ಕೃತಿ ಸೇರಬಾರದು ಎಂಬುವುದನ್ನು ಖಾತ್ರಿಪಡಿಸಿಕೊಂಡೆವು. ಯಾರು ಅದೆಷ್ಟೇ ದಿಒಡ್ಡ ಹುದ್ದೆಯಲ್ಲಿರಲಿ, ಎಷ್ಟೇ ದೊಡ್ಡ ಶ್ರೀಮಂತರಾಗಿರಲಿ ಅವರಿಗೆ ಲಸಿಕೆ ಸಾಮಾನ್ಯರಂತೇ ಕೊಟ್ಟಿದ್ದೇವೆ 

ನಮ್ಮ ದೇಶದ ಬಗ್ಗೆ ಇಲ್ಲಿ ಹೆಚ್ಚಿನ ಮಂದಿ ಲಸಿಕೆ ಹಾಕಿಸಲು ಬರುವುದಿಲ್ಲ ಎಂದೇ ಹೇಳಲಾಗಿತ್ತು. ವಿಶ್ವದ ಅನೇಕ ದೊಡ್ಡ ರಾಷ್ಟ್ರಗಳಲ್ಲಿ ಇಂದಿಗೂ ಲಸಿಕೆ ಹಾಕಿಸಲು ಇರುವ ಭಯ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ ಭಾರತದ ಜನರು ನೂರು ಕೋಟಿ ಲಸಿಕೆ ಪಡೆದು ಇಂತಹ ಜನರ ಬಾಯಿ ಮುಚ್ಚಿಸಿದ್ದಾರೆ.