ಗಣತಂತ್ರದಂದು ತ್ರಿವರ್ಣ ಧ್ಚಜಕ್ಕೆ ಅವಮಾನ: ಮನ್‌ ಕೀ ಬಾತ್‌ನಲ್ಲಿ ಮೋದಿ ಕಿಡಿ!

2021ರ ಮೊದಲ ಮನ್​ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಗಣರಾಜ್ಯೋತ್ಸವದ ದಿನ ನಡೆದ ಕೆಂಪು ಕೋಟೆ ಹಿಂಸಾಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜನವರಿ 26ರಂದು ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನಕ್ಕೆ ಸಾಕ್ಷಿಯಾದ ದೇಶ ಆಘಾತಕ್ಕೊಳಗಾಗಿದೆ ಎಂದು ಹೇಳಿದ್ದಾರೆ.

First Published Jan 31, 2021, 1:03 PM IST | Last Updated Jan 31, 2021, 1:33 PM IST

2021ರ ಮೊದಲ ಮನ್​ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಗಣರಾಜ್ಯೋತ್ಸವದ ದಿನ ನಡೆದ ಕೆಂಪು ಕೋಟೆ ಹಿಂಸಾಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜನವರಿ 26ರಂದು ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನಕ್ಕೆ ಸಾಕ್ಷಿಯಾದ ದೇಶ ಆಘಾತಕ್ಕೊಳಗಾಗಿದೆ ಎಂದು ಹೇಳಿದ್ದಾರೆ.

ಅಲ್ಲದೇ ಪದ್ಮ ಪುರಸ್ಕಾರಕ್ಕೆ ಭಾಜನರಾದ ಸಾಧಕರನ್ನು ಅಭಿನಂದಿಸಿ, ದೇಶದ ಜನರು ಅವರಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ ಭಾರತೀಯ ಕ್ರಿಕೆಟ್ ತಂಡವನ್ನು ಶ್ಲಾಘಿಸಿದ್ದಾರೆ. 

ಇನ್ನುಳಿದಂತೆ ಕಳೆದ ಒಂದು ವರ್ಷದಲ್ಲಿ ಜನರ ದೃಷ್ಟಿಕೋನದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಈಗ ಬಹಳಷ್ಟು ಗ್ರಾಹಕರು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಬಳಸಲು ಮುಂದಾಗಿದ್ದಾರೆ. ಈ ಮೂಲಕ ವೋಕಲ್ ಫಾರ್ ಲೋಕಲ್​ಗೆ ತಮ್ಮ ಬೆಂಬಲ ತೋರಿಸಿದ್ದಾರೆ ಮತ್ತು ವಿಶ್ವ ದರ್ಜೆಯ ಉತ್ಪನ್ನಗಳನ್ನು ತಯಾರಿಸಲು ತಯಾರಕರು ಮತ್ತು ಉದ್ಯಮಿಗಳಿಗೆ ಪ್ರಧಾನಿ ಮೋದಿ ಹೇಳಿದರು.

Video Top Stories