ಮನ್‌ ಕೀ ಬಾತ್‌' 100ನೇ ಸಂಚಿಕೆ: ವಿವಿಧ ಕ್ಷೇತ್ರದ ದಿಗ್ಗಜರಿಂದ ಪ್ರಶಂಸೆಯ ಸುರಿಮಳೆ

‘ಮನ್‌ ಕಿ ಬಾತ್‌’ ರೇಡಿಯೋ ಕಾರ್ಯಕ್ರಮದ 100ನೇ ಸಂಚಿಕೆ ಏಪ್ರಿಲ್ 30ಕ್ಕೆ ಬಿತ್ತರವಾಗಲಿದ್ದು, ಕಾರ್ಯಕ್ರಮದ ಬಗ್ಗೆ ವಿವಿಧ ಕ್ಷೇತ್ರದ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದು ಹೀಗೆ...

First Published Apr 28, 2023, 8:50 PM IST | Last Updated Apr 28, 2023, 8:50 PM IST

ನವದೆಹಲಿ (ಏ.28): ದೇಶದ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರೆಯುವ ಕಾರ್ಯಕ್ರಮವಾದ ಮನ್‌ ಕೀ ಬಾತ್‌ ರೆಡಿಯೋ ಕಾರ್ಯಕ್ರಮಕ್ಕೆ ಈಗ 100ನೇ ಸಂಚಿಕೆಯ ಸಂಭ್ರಮ. ಆಲ್‌ ಇಂಡಿಯಾ ರೇಡಿಯೋದಲ್ಲಿ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬಿತ್ತರವಾಗುವ ಮನ್‌ ಕೀ ಬಾತ್‌ನ 100ನೇ ಸಂಚಿಕೆ ಏಪ್ರಿಲ್‌ 30ಕ್ಕೆ ಪ್ರಸಾರವಾಗಲಿದೆ. 2014ರ ಅಕ್ಟೋಬರ್‌ ತಿಂಗಳಿನಲ್ಲಿ ಆರಂಭವಾಗಿದ್ದ ಮನ್‌ ಕೀ ಬಾತ್‌ ಕಾರ್ಯಕ್ರಮ ಈವರೆಗೂ ಒಂದೂ ತಿಂಗಳೂ ಕೂಡ ತಪ್ಪಿಲ್ಲ. ಈ ಕಾರ್ಯಕ್ರಮದ ಕುರಿತಂತೆ ಆಮಿರ್‌ ಖಾನ್‌, ರವೀನಾ ಟಂಡನ್,‌ ರಿಕ್ಕಿ ಕೇಜ್‌ ಸೇರಿದಂತೆ ವಿವಿಧ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಮನ್‌ ಕಿ ಬಾತ್‌’ ಗಿನ್ನಿಸ್‌ ದಾಖಲೆ ಸೇರುವ ಸಾಧ್ಯ​ತೆ: ಸಂಸದ ಬಿ.ವೈ.ರಾಘವೇಂದ್ರ