ಮಣಿಪುರದಲ್ಲಿ ಮತ್ತೆ ಸಂಘರ್ಷ ತಾರಕಕ್ಕೆ ಬಿಜೆಪಿಗೆ ನೀಡಿದ ಬೆಂಬಲ ವಾಪಸ್ ಪಡೆದ ಎನ್‌ಪಿಪಿ!

ಮೈತೇಹಿ ಹಾಗೂ ಕುಕಿ ಸಮುದಾಯ ಮಧ್ಯೆ ತೀವ್ರ ಘರ್ಷಣೆ ಶುರುವಾಗಿದ್ದು ಮಣಿಪುರ ಮತ್ತೊಮ್ಮೆ ಅತೀ ಭೀಕರ ಸಂಘರ್ಷಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಬೀರೆನ್ ಸಿಂಗ್ ಸರ್ಕಾರ ಪತನದ ಆತಂಕ ಎದುರಿಸುತ್ತದೆ. 

Share this Video
  • FB
  • Linkdin
  • Whatsapp

ಮೈತೇಹಿ ಜನಾಂಗದ 6 ಮಂದಿಯನ್ನು ಅಪಹರಣಗೈದ ಕುಕಿ ಸಮುದಾಯದ ಉಗ್ರರು ಬಳಿಕ ಹತ್ಯೆ ಮಾಡಿ ಎಸೆದಿದ್ದರು. ಇದು ಮಣಿಪುರದಲ್ಲಿ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನೆ ತಾರಕಕ್ಕೇರಿದೆ. ಈ ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡ ಪರಿಸ್ಥಿತಿ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ನ್ಯಾಷನಲ್ ಪೀಪಲ್ಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪೆಡೆಯುವುದಾಗಿ ಘೋಷಿಸಿದೆ. 

Related Video