ಮಂಗಳೂರಿನ 3 ದೇವಸ್ಥಾನ ಸೇರಿ 6 ಸ್ಥಳಗಳಲ್ಲಿ ಸ್ಫೋಟಕ್ಕೆ ಸಂಚು, ತನಿಖೆಯಲ್ಲಿ ಬಹಿರಂಗ!
ಮಂಗಳೂರು ಸ್ಫೋಟದ ಹೊಣೆ ಹೊತ್ತ ಉಗ್ರ ಸಂಘಟನೆ, ಮಂಗಳೂರಿನ 3 ದೇವಸ್ಥಾನ ಸೇರಿ 6 ಸ್ಥಳಗಳಲ್ಲಿ ಸ್ಫೋಟಕ್ಕೆ ಸಂಚು, ಕುಕ್ಕರ್ ನೋಡಿ ಬೆಚ್ಚಿ ಬಿದ್ದ ಕರ್ನಾಟಕ ಸೇರಿದಂತೆ ಇಂದಿನ ಇಡೀ ದಿನದ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಮಂಗಳೂರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಉಗ್ರ ಆರೀಖ್ ಟಾರ್ಗೆಟ್ ಮಂಗಳೂರಿನ 6 ಸ್ಥಳಗಳು. ಕದ್ರಿ ದೇವಸ್ಥಾನ ಸೇರಿ 3 ದೇವಸ್ಥಾನ, ಆರ್‌ಎಸ್‌ಎಸ್ ಕಚೇರಿ ಸೇರಿ 6 ಕಡೆಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಅನ್ನೋದು ಬಹಿರಂಗವಾಗಿದೆ.ಉಗ್ರ ಶಾರೀಖ್ ಆರ್‌ಎಸ್‌ಎಸ್ ಶಕ್ತಿ ಕೇಂದ್ರವನ್ನು ಟಾರ್ಗೆಟ್ ಮಾಡಿರುವುದು ಗೂಗಲ್ ಸರ್ಚ್ ಮೂಲಕ ಬಹಿರಂಗವಾಗಿದೆ. ಮಂಗಳೂರು ಸ್ಫೋಟವನ್ನು ನಾವೇ ಮಾಡಿದ್ದೇವೆ ಎಂದು ಹೆಸರು ಕೇಳದ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆ ಹೇಳಿದೆ. ನಮ್ಮ ಸದಸ್ಯ ಯಶಸ್ವಿಯಾಗಿ ಕೆಲಸ ಮಾಡಿದ್ದಾನೆ ಎಂದು ಸಂಘಟನೆ ಹೇಳಿದೆ. ಇಷ್ಟೇ ಅಲ್ಲ ಈ ಸ್ಫೋಟಕ್ಕೆ ಕಾರಣಗಳನ್ನು ಹೇಳಿದೆ.