ಮಹಾರಾಷ್ಟ್ರ ಬಿಕ್ಕಟ್ಟಿನ ಬೆನ್ನಲ್ಲೇ ಮೋದಿ ಸರ್ಕಾರಕ್ಕೆ ಮತ್ತೊಂದು ಆಘಾತ!
ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮಾ ಶುರುವಾಗಿದೆ. ಸರ್ಕಾರ ರಚನೆಯಾಗುವ ಮುನ್ನವೇ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಅಂತ್ಯಕಾಣುವ ಲಕ್ಷಣಗಳು ಗೋಚರಿಸಿವೆ. ವಿಧಾನಸಭೆ ಫಲಿತಾಂಶ ಪ್ರಕಟವಾಗಿ 17 ದಿನಗಳು ಕಳೆದಿದ್ದರೂ, ಬಿಜೆಪಿ-ಶಿವಸೇನೆ ಸಂಬಂಧ ಇನ್ನೂ ಹದಗೆಡುತ್ತಲೇ ಇದೆ. ಈ ನಡುವೆ ಶಿವಸೇನೆಯ ಕೇಂದ್ರ ಸಚಿವ ರಾಜೀನಾಮೆ ನೀಡಿದ್ದಾರೆ.
ಮುಂಬೈ (ನ.11): ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮಾ ಶುರುವಾಗಿದೆ. ಸರ್ಕಾರ ರಚನೆಯಾಗುವ ಮುನ್ನವೇ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಅಂತ್ಯಕಾಣುವ ಲಕ್ಷಣಗಳು ಗೋಚರಿಸಿವೆ.
ವಿಧಾನಸಭೆ ಫಲಿತಾಂಶ ಪ್ರಕಟವಾಗಿ 17 ದಿನಗಳು ಕಳೆದಿದ್ದರೂ, ಬಿಜೆಪಿ-ಶಿವಸೇನೆ ಸಂಬಂಧ ಇನ್ನೂ ಹದಗೆಡುತ್ತಲೇ ಇದೆ. ಈ ನಡುವೆ ಶಿವಸೇನೆಯ ಕೇಂದ್ರ ಸಚಿವ ರಾಜೀನಾಮೆ ನೀಡಿದ್ದಾರೆ.
ಕಳೆದ ಅ. 24 ರಂದು ವಿಧಾನಸಭೆ ಫಲಿತಾಂಶಗಳು ಪ್ರಕಟವಾಗಿದ್ದು, ಬಿಜೆಪಿ-ಶಿವಸೇನೆ ಮೈತ್ರಿಕೂಟ ಬಹುಮತ ಪಡೆದಿದೆ. ಆದರೆ, ಎರಡೂ ಪಕ್ಷಗಳು ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಸರ್ಕಾರ ರಚನೆ ಕಗ್ಗಾಂಟಾಗಿಯೇ ಉಳಿದಿದೆ. 288 ಸದಸ್ಯಬಲದ ವಿಧಾನಸಭೆಯಲ್ಲಿ, ಬಿಜೆಪಿ105 ಸ್ಥಾನ ಗಳಿಸಿದರೆ, ಮಿತ್ರಪಕ್ಷ ಶಿವಸೇನೆ 56 ಸ್ಥಾನಗಳನ್ನು ಬಾಚಿಕೊಂಡಿದೆ.