ಮೇಲುಕೋಟೆ ಚೆಲುವನಾರಾಯಣನ ದರ್ಶನ ಪಡೆದ ಚೌಹಾಣ್
ಮೇಲುಕೋಟೆಗೆ ಆಗಮಿಸಿದ ಮಧ್ಯಪ್ರದೇಶ ಸಿಎಂ/ ಹರಕೆ ತೀರಿಸಲು ಬಂದ ಮುಖ್ಯಮಂತ್ರಿ/ ಪೂರ್ಣ ಕುಂಭ ಸ್ವಾಗತ/ ಬರಮಾಡಿಕೊಂಡ ನಾರಾಯಣ ಗೌಡ
ಮೇಲುಕೋಟೆ (ಜೂ. 26) ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ ದೇವಾಲಯಕ್ಕೆ ಹರಕೆ ತೀರಿಸಲು ಕುಟುಂಬ ಸಮೇತ ಆಗಮಿಸಿದ್ದರು.
ಸೆನ್ಸಾರ್ ಘಂಟೆ ತಯಾರಿಸಿ ಹಿಂದು ದೇವಾಲಯಕ್ಕೆ ನೀಡಿದ ಮುಸ್ಲಿಂ
ಶಿವರಾಜ್ ಸಿಂಗ್ ಚೌಹಾಣ್ ಆಗಮನ ಹಿನ್ನೆಲೆ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿತ್ತು. ಚೌಹಾಣ್ ಅವರನ್ನು ರಾಜ್ಯ ಸರ್ಕಾರದ ವತಿಯಿಂದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಬರಮಾಡಿಕೊಂಡರು.